ಪಾಟ್ನಾ:ಮಹಾಮಾರಿ ಕೊರೊನಾ ರೌದ್ರನರ್ತನಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಈಗಾಗಲೇ ದೇಶದಲ್ಲಿ ಕೊರೊನಾ ವೈರಸ್ 500ರ ಗಡಿ ದಾಟಿದ್ದು, 9 ಜನರ ಪ್ರಾಣ ಬಲಿ ಪಡೆದುಕೊಂಡಿದೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ಮದುವೆ... ಬಿಹಾರದಲ್ಲಿ ಕೊರೊನಾ ವೈರಸ್ ತಂದ ಪಜೀತಿ! - ವಿಡಿಯೋ ಕಾನ್ಪರೆನ್ಸ್ ಮದುವೆ
ಮಹಾಮಾರಿ ಕೊರೊನಾ ಭೀತಿಯಿಂದಾಗಿ ಇಡೀ ಭಾರತವೇ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಇದರ ನಡುವೆ ಬಿಹಾರದ ಪಾಟ್ನಾದಲ್ಲಿ ವಿಚಿತ್ರ ಮದುವೆ ನಡೆದಿದ್ದು, ವಿಡಿಯೋ ಕಾನ್ಪರೆನ್ಸ್ ಮೂಲಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
![ವಿಡಿಯೋ ಕಾನ್ಪರೆನ್ಸ್ ಮೂಲಕ ಮದುವೆ... ಬಿಹಾರದಲ್ಲಿ ಕೊರೊನಾ ವೈರಸ್ ತಂದ ಪಜೀತಿ! 'Nikah' of a couple was performed through video conferencing](https://etvbharatimages.akamaized.net/etvbharat/prod-images/768-512-6528139-thumbnail-3x2-wdfdf.jpg)
'Nikah' of a couple was performed through video conferencing
ವಿಡಿಯೋ ಕಾನ್ಪರೆನ್ಸ್ ಮೂಲಕ ಮದುವೆ
ಭಾರತದ ಅರ್ಧ ರಾಜ್ಯಗಳು ಈಗಾಗಲೇ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದು ಲಾಕ್ಡೌನ್ ಆಗಿದೆ. ಹೀಗಾಗಿ ಜನರು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದೇ ಕಾರಣಕ್ಕಾಗಿ ಅನೇಕ ಕಾರ್ಯಕ್ರಮಗಳು ಮುಂದೂಡಿಕೆಯಾಗುತ್ತಿದ್ದು, ಬಿಹಾರದ ಪಾಟ್ನಾದಲ್ಲಿ ವಿಚಿತ್ರ ಹಾಗೂ ಅಪರೂಪದ ಘಟನೆವೊಂದು ನಡೆದಿದೆ. ಕೊರೊನಾ ವೈರಸ್ನಿಂದ ಎಲ್ಲರೂ ಒಟ್ಟಿಗೆ ಸೇರಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗದ ಕಾರಣ ವಿಡಿಯೋ ಕಾನ್ಪರೆನ್ಸ್ ಮೂಲಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.