ಕರ್ನಾಟಕ

karnataka

ETV Bharat / bharat

'ಮಾಸ್ಕೋ ವಿಕ್ಟರಿ ಡೇ' ರಷ್ಯಾ ಸೇನೆ ಭರ್ಜರಿ ತಯಾರಿ..! - ಕೊರೊನಾ ಮಹಾಮಾರಿ

ಎರಡನೇ ಮಹಾಯುದ್ಧದಲ್ಲಿ ಗೆಲುವು ಸಾಧಿಸಿದ ಕಾರಣಕ್ಕೆ ಪ್ರತಿವರ್ಷ ಮಾಸ್ಕೋದಲ್ಲಿ ಆಚರಿಸಲ್ಪಡುವ ಮಾಸ್ಕೋ ವಿಕ್ಟರಿ ಡೇ ಸಮಾರಂಭಕ್ಕೆ ರಷ್ಯಾ ಸೇನೆ ಪೂರ್ವಾಭ್ಯಾಸ ನಡೆಸಿದೆ.

Moscow Victory Day p
ಮಾಸ್ಕೋ ವಿಕ್ಟರಿ ಡೇ

By

Published : Jun 15, 2020, 10:44 AM IST

ಮಾಸ್ಕೋ (ರಷ್ಯಾ):ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ನಾಜಿಗಳ ವಿರುದ್ಧ ಗೆಲುವು ಸಾಧಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಮಾಸ್ಕೋ ವಿಕ್ಟರಿ ಡೇ ಆಚರಿಸಲು ರಷ್ಯಾ ಭರಪೂರ ಸಿದ್ಧತೆ ನಡೆಸಿದೆ.

ಸಂಪ್ರದಾಯದಂತೆ ಈ ವರ್ಷದ ಮೇ 9ರಂದು ಸಮಾರಂಭ ನಡೆಯಬೇಕಿದ್ದು, ಕೊರೊನಾ ವೈರಸ್​ ಹಾವಳಿ ಕಾರಣಕ್ಕೆ ರದ್ದಾಗಿತ್ತು. ಈಗ ಇದೇ ತಿಂಗಳ ಕೊನೆಯ ವಾರಕ್ಕೆ ಅಂದ್ರೆ ಜೂನ್ 24ಕ್ಕೆ ಸಮಾರಂಭ ನಡೆಸಲು ಸಿದ್ಧತೆ ನಡೆಸಲಾಗಿದೆ.

ಇದೇ ಕಾರಣಕ್ಕಾಗಿ ಶನಿವಾರ ರಾತ್ರಿ ರಷ್ಯಾದ ರಾಜಧಾನಿ ಮಾಸ್ಕೋದ ರೆಡ್​ ಸ್ಕ್ವೇರ್​​​​​​ನಲ್ಲಿ ಟ್ಯಾಂಕರ್​ಗಳು, ಶಸ್ತ್ರ ಸಜ್ಜಿತ ಸೇನೆ, ಮಿಸೈಲ್​ಗಳನ್ನು ತಂದು ಪೂರ್ವಾಭ್ಯಾಸ ನಡೆಸಲಾಗಿದೆ. ಸೈನಿಕರು ಮಾಸ್ಕೋದ ಕೇಂದ್ರ ಭಾಗದಿಂದ ರಸ್ತೆಗಳಲ್ಲಿ ಪರೇಡ್​ ನಡೆಸಿದ್ದಾರೆ.

ನಾಜಿಗಳ ವಿರುದ್ಧ ಗೆದ್ದ ದಿನವನ್ನು ರಷ್ಯಾದಲ್ಲಿ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಪ್ರತಿವರ್ಷ ನಡೆಯುವ ಈ ಸಮಾರಂಭ ವಿಶ್ವಾದ್ಯಂತ ಕೋಟ್ಯಂತರ ಮಂದಿಯನ್ನು ಆಕರ್ಷಿಸುತ್ತದೆ.

ಸದ್ಯಕ್ಕೆ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಷ್ಯಾದಲ್ಲಿ ಈವರೆಗೆ 5,28,964 ಸೋಂಕಿತರಿದ್ದು, ಮೂರನೇ ಅತಿ ಹೆಚ್ಚು ಸೋಂಕಿತರಿರುವ ದೇಶ ಇದಾಗಿದೆ.

ABOUT THE AUTHOR

...view details