ಕೊಲ್ಲಂ(ಕೇರಳ): ಕೊಲ್ಲಂನ ಕುಳತುಪುಜದಲ್ಲಿ ಪತ್ತೆಯಾದ ಪಾಕಿಸ್ತಾನ ತಯಾರಿಸಿದವು ಎನ್ನಲಾದ 14 ಗುಂಡುಗಳ ಬಗ್ಗೆ ಮಿಲಿಟರಿ ಇಂಟೆಲಿಜೆನ್ಸ್, ರಾ(raw) ಮತ್ತು ಎನ್ಐಎ ಮಾಹಿತಿ ಕಲೆಹಾಕಲು ಮುಂದಾಗಿವೆ.
ಕೊಲ್ಲಂನಲ್ಲಿ ಪಾಕ್ ಉತ್ಪಾದಿತ ಸಜೀವ ಗುಂಡುಗಳು ಪತ್ತೆ: ರಾ, ಎನ್ಐಎನಿಂದ ತನಿಖೆ ಚುರುಕು - ಕೊಲ್ಲಂನ ಕುಳತುಪುಜ
ಕೇರಳದ ಕೊಲ್ಲಂ ಬಳಿ ಸಜೀವ ಗುಂಡುಗಳು ಪತ್ತೆಯಾಗಿವೆ. ಇವು ಸಶಸ್ತ್ರ ಪಡೆಗಳು ಬಳಸಿದ ಗುಂಡುಗಳಾಗಿವೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಗುಂಡುಗಳು ತಮಿಳುನಾಡಿನ ಅರಣ್ಯದ ಗಡಿಯಲ್ಲಿರುವ ಕುಳತುಪುಜದಲ್ಲಿ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಪತ್ತೆಯಾಗಿದ್ದವು.
![ಕೊಲ್ಲಂನಲ್ಲಿ ಪಾಕ್ ಉತ್ಪಾದಿತ ಸಜೀವ ಗುಂಡುಗಳು ಪತ್ತೆ: ರಾ, ಎನ್ಐಎನಿಂದ ತನಿಖೆ ಚುರುಕು NIA, RAW, Military intel started probe on Pak-made bullets in Kerala](https://etvbharatimages.akamaized.net/etvbharat/prod-images/768-512-6176986-thumbnail-3x2-nin.jpg)
ಕೊಲ್ಲಂನಲ್ಲಿ ಪತ್ತೆಯಾದ ಗುಂಡುಗಳು
ಈ ಬುಲೆಟ್ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಮಲಯಾಳಂ ಪತ್ರಿಕೆಯೊಂದರಲ್ಲಿ ಸುತ್ತಿ ಇಡಲಾಗಿತ್ತು. ಈ ಘಟನೆಯ ಬಗ್ಗೆ ಭಯೋತ್ಪಾದನಾ ನಿಗ್ರಹ ದಳವೂ ತನಿಖೆ ನಡೆಸಲಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಮಾಹಿತಿ ನೀಡಿದ್ದಾರೆ.
ಕೊಲ್ಲಂನಲ್ಲಿ ಪತ್ತೆಯಾದ ಗುಂಡುಗಳು, ಎನ್ಐಎ, ರಾ ತನಿಖೆ ಚುರುಕು
ಇವು ಸಶಸ್ತ್ರ ಪಡೆಗಳು ಬಳಸಿದ ಗುಂಡುಗಳಾಗಿವೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ಗುಂಡುಗಳು ಕೊಲ್ಲಂನ ಗಡಿಭಾಗದ ಅರಣ್ಯದಲ್ಲಿರುವ ಕುಳತುಪುಜದಲ್ಲಿ ಶನಿವಾರ ಮಧ್ಯಾಹ್ನ ಪತ್ತೆಯಾಗಿದ್ದವು.
Last Updated : Feb 24, 2020, 12:19 AM IST