ನವದೆಹಲಿ: ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ 10 ಜನರನ್ನು ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವಿಚಾರಣೆಗೊಳಪಡಿಸಿದೆ.
ಐಸಿಸ್ ಜೊತೆ ಸೇರಿ ದೇಶದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ: ಎನ್ಐಎಯಿಂದ ಆರೋಪಿಗಳ ವಿಚಾರಣೆ - ಐಸಿಸ್ ಸಂಘಟನೆಯೊಂದಿಗೆ ಕೈ ಜೋಡಿಸಿ ಭಾರತದಲ್ಲಿ ಭಯೋತ್ಪಾದನಾ ಕೃತ್ಯ
ಐಸಿಸ್ ಸಂಘಟನೆಯೊಂದಿಗೆ ಕೈ ಜೋಡಿಸಿ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ 10 ಆರೋಪಿಗಳನ್ನು ಇಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಚಾರಣೆ ನಡೆಸಿದೆ.
ಸಾಂಧರ್ಭಿಕ ಚಿತ್ರ
ಐಸಿಸ್ ಸಂಘಟನೆಯೊಂದಿಗೆ ಸೇರಿಕೊಂಡು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಖಾಜಾ ಮೊಹಿದ್ದೀನ್ ಮತ್ತವರ ಸಹಚರರನ್ನು ಎನ್ಐಎ ವಿಚಾರಣೆ ನಡೆಸಿದೆ. ಈ ಆರೋಪಿಗಳು ನಕಲಿ ದಾಖಲಾತಿಗಳ ಮೇಲೆ ಸಿಮ್ ಕಾರ್ಡ್‌ಗಳನ್ನು ಪಡೆದು ಕುಕೃತ್ಯಕ್ಕೆ ಯೋಜನೆ ರೂಪಿಸುತ್ತಿದ್ದರು ಎಂದು ಎನ್ಐಎ ತಿಳಿಸಿದೆ.
ಪ್ರಕರಣದ ಕೂಲಂಕಶ ತನಿಖೆಗಾಗಿ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಆರು ದಿನಗಳ ಕಾಲ ಆರೋಪಿಗಳನ್ನು ಬಂಧನದಲ್ಲಿರಿಸಲಾಗಿದೆ.