ನವದೆಹಲಿ: ಐಸಿಸ್ ಉಗ್ರರಿಗೆ ಸಂಬಂಧಿಸಿದ ಪ್ರಕರಣ ಸಂಬಂಧ 10 ಜನ ಆರೋಪಿಗಳನ್ನು ಬುಧವಾರ ಎನ್ಐಎ ವಿಚಾರಣೆಗೊಳಪಡಿಸಿದೆ.
ಐಸಿಸ್ ಜೊತೆ ನಂಟು ಆರೋಪ: ಎನ್ಐಎಯಿಂದ 10 ಶಂಕಿತರ ವಿಚಾರಣೆ - ಶಂಕಿತ ಉಗ್ರರ ವಿಚಾರಣೆ
ಐಸಿಸ್ ಉಗ್ರರ ಸಂಬಂಧ 10 ಜನ ಶಂಕಿತರನ್ನು ಎನ್ಐಎ ತೀವ್ರ ವಿಚಾರಣಗೆ ಒಳಪಡಿಸಿದೆ. ಶಂಕಿತರು ಐಸಿಸ್ ಜೊತೆ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ.

ಎನ್ಐಎಯಿಂದ 10 ಶಂಕಿತರ ವಿಚಾರಣೆ
ಐಸಿಸ್ ಹಾಗೂ ಖಾಜಾ ಮೊಹಿದ್ದೀನ್ ಜೊತೆ ಸೇರಿಕೊಂಡು ಭಾರತದಲ್ಲಿ ಕೃತ್ಯ ಎಸಗಲು ನಕಲಿ ದಾಖಲೆಗಳನ್ನು ನೀಡಿ ಆರೋಪಿಗಳು ಸಿಮ್ ಕಾರ್ಡ್ ಪಡೆದಿದ್ದರು ಎಂದು ಎನ್ಐಎ ಮಾಹಿತಿ ನೀಡಿದೆ.
ಸುದೀರ್ಘ ವಿಚಾರಣೆಗಾಗಿ ಫೆ.27ರಿಂದ ಮಾ.3ರವರೆಗೆ ಆರು ದಿನಗಳ ಕಾಲ ಆರೋಪಿಗಳನ್ನು ಎನ್ಐಎ ವಶಕ್ಕೆ ಪಡೆದಿದೆ. ಆರಂಭದಲ್ಲಿ ಈ ಪ್ರಕರಣವನ್ನು ತಮಿಳುನಾಡು ಕ್ಯೂ ಬ್ರ್ಯಾಂಚ್ ಪೊಲೀಸರು ದಾಖಲಿಸಿದ್ದರು. ವಿಚಾರಣೆಯಲ್ಲಿ ಕೃತ್ಯಗಳ ಎಸಗಲು ಆರೋಪಿಗಳು ನಡೆಸಿದ ಸಂಚಿನ ಕುರಿತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಚೆನ್ನೈನ ಎನ್ಐಎ ಕೋರ್ಟ್ಗೆ ರಾಷ್ಟ್ರೀಯ ತನಿಖಾ ಟೀಂ ಸಲ್ಲಿಸಲಿದೆ.