ನವದೆಹಲಿ:ಗೂಢಚರ್ಯೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮತ್ತು ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡಿದ್ದ ಆರೋಪದಲ್ಲಿ ಗುಜರಾತ್ ನಿವಾಸಿಯಾದ ಗೀಟೇಲಿ ಇಮ್ರಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎನ್ಐಎ ಸ್ಪಷ್ಟನೆ ನೀಡಿದೆ.
ಐಎಸ್‌ಐಗಾಗಿ ಗೂಢಚರ್ಯೆ ಆರೋಪ: ಎನ್ಐಎಯಿಂದ ಓರ್ವನ ಬಂಧನ - ಎನ್ಐಎಯಿಂದ ಓರ್ವ ಬಂಧನ
ಪಾಕಿಸ್ತಾನದ ಐಎಸ್‌ಐಗಾಗಿ ಕೆಲಸ ಮಾಡಿದ್ದ ಆರೋಪದಲ್ಲಿ ಗುಜರಾತ್ ನಿವಾಸಿಯನ್ನು ಎನ್ಐಎ ಬಂಧಿಸಿದೆ.
ಐಎಸ್‌ಐಗಾಗಿ ಗೂಢಾಚರಿಕೆ ಆರೋಪ
ಭಾರತೀಯ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಮತ್ತು ಇತರ ರಕ್ಷಣಾ ಸಂಸ್ಥೆಗಳ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಪಾಕಿಸ್ತಾನ ಈ ಏಜೆಂಟ್ನನ್ನು ನೇಮಿಸಿದೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ವಿಶಾಖಪಟ್ಟಣಂನ ಬೇಹುಗಾರಿಕಾ ಪ್ರಕರಣದಲ್ಲಿ ಈತನ ಹೆಸರು ಥಳಕು ಹಾಕಿಕೊಂಡಿದ್ದು, ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.