ಕರ್ನಾಟಕ

karnataka

ETV Bharat / bharat

ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿಗಳ ಪತ್ತೆಗೆ ಇಂಟರ್​ಪೋಲ್​ ಸಹಾಯ ಪಡೆಯಲಿರುವ ಎನ್​ಐಎ - ಚಿನ್ನ ಕಳ್ಳ ಸಾಗಣೆ ಪ್ರಕರಣದ ಸುದ್ದಿ

ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತೆ ಐದು ಮಂದಿಯನ್ನು ಗುರ್ತಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

National Investigation Agency
ಎನ್​ಐಎ

By

Published : Nov 9, 2020, 8:24 PM IST

ಕೊಚ್ಚಿ:ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾದಳ ಮತ್ತೆ ಐದು ಮಂದಿ ಆರೋಪಿಗಳನ್ನು ಗುರ್ತಿಸಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಐದು ಮಂದಿಯಲ್ಲಿ ನಾಲ್ಕು ಮಂದಿ ಯುಎಇಯಲ್ಲಿ ನೆಲೆಸಿದ್ದು, ಇವರ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಇಂಟರ್​​​​ಪೋಲ್ ಅಧಿಕಾರಿಗಳ ಸಹಕಾರ ಪಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಲ್ಲಾಪುರ ಮೂಲದ ಮೊಹಮ್ಮದ್ ಅಸ್ಲಾಮ್ (44), ಅಬ್ದುಲ್ ಲತೀಫ್ (47), ನಜಿರುದ್ದೀನ್ ಶಾ ಅಲಿಯಾಸ್ ನಸ್ರು (32) ಮತ್ತು ರಂಜಾನ್ ಪರಾಂಚೇರಿ ಅಲಿಯಾಸ್ ಸಾಬು ಪುಲ್ಲಾರ (36) ಕೋಯಿಕ್ಕೋಡ್ ಮೂಲದ ಮೊಹಮ್ಮದ್ ಮನ್ಸೂರ್ ಪಿಎಸ್ ಅಲಿಯಾಸ್ ಮಂಜು (35) ಎಂದು ಆರೋಪಿಗಳನ್ನು ಗುರುತಿಸಲಾಗಿದೆ.

ಮೊಹಮ್ಮದ್ ಅಸ್ಲಾಂ ಹೊರತುಪಡಿಸಿ ಉಳಿದೆಲ್ಲರೂ ಯುಎಇಯಲ್ಲಿ ನೆಲೆಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಈಗಾಗಲೇ ಎನ್​ಐಎ ವಿಶೇಷ ಕೋರ್ಟ್​ಗೆ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್​ ಹೊರಡಿಸುವಂತೆ ಮನವಿ ಮಾಡಿದೆ.

ಈ ಪ್ರಕರಣದ ತನಿಖೆಗಾಗಿ ಆರೋಪಿಗಳಿಗೆ ಭದ್ರತೆ ನೀಡಿ ಮತ್ತು ಇಂಟರ್​ಪೋಲ್​ ಮೂಲಕ ಬ್ಲೂ ನೋಟಿಸ್ ನೀಡಬೇಕಾಗಿದೆ ಎಂದು ರಾಷ್ಟ್ರೀಯ ತನಿಖಾದಳ ಕೋರ್ಟ್​ಗೆ ಹೇಳಿದೆ.

ಈಗ ಐದು ಮಂದಿಯನ್ನೂ ಸೇರಿಸಿ, ಒಟ್ಟು 35 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳ ದೂರು ದಾಖಲಿಸಿಕೊಂಡಿದೆ. ಇದರ ಜೊತೆಗೆ 21 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸಿದೆ.

ABOUT THE AUTHOR

...view details