ನವದೆಹಲಿ:ಮಹಿಳೆಯರ ಮೇಲಿನ ತಾರತಮ್ಯಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉಪ ಸಮಿತಿಯೊಂದನ್ನು(ಸಿಇಡಿಎಡಬ್ಲ್ಯೂ) ರಚಿಸಿದೆ.
ಮಹಿಳಾ ತಾರತಮ್ಯ ನಿರ್ಮೂಲನೆಗೆ ಉಪ ಸಮಿತಿ ರಚನೆ: ಎನ್ಎಚ್ಆರ್ಸಿ - CEDAW
ಮಹಿಳೆಯರ ಮೇಲಿನ ತಾರತಮ್ಯಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉಪ ಸಮಿತಿಯೊಂದನ್ನು ರಚಿಸಿದೆ.
![ಮಹಿಳಾ ತಾರತಮ್ಯ ನಿರ್ಮೂಲನೆಗೆ ಉಪ ಸಮಿತಿ ರಚನೆ: ಎನ್ಎಚ್ಆರ್ಸಿ women](https://etvbharatimages.akamaized.net/etvbharat/prod-images/768-512-7160244-465-7160244-1589255241812.jpg)
ಮಹಿಳಾ ತಾರತಮ್ಯ
CEDAW(Convention on the Elimination of All Forms of Discrimination Against Women) ಮಹಿಳೆಯರ ವಿರುದ್ಧದ ಎಲ್ಲ ವಿಧದ ಶೋಷಣೆಗಳ ನಿರ್ಮೂಲನಾ ಉಪಸಮಿತಿಯು ದೇಶೀಯ ಕಾನೂನು, ನೀತಿ ಚೌಕಟ್ಟುಗಳು ಮತ್ತು ಯೋಜನೆಗಳ ಅವಶ್ಯಕತೆಗಳನ್ನು ಪೂರೈಸುತ್ತವೆಯೇ ಎಂದು ಪರೀಕ್ಷಿಸುವ ಗುರಿ ಹೊಂದಿದೆ.
ನಾಗರಿಕ ಸಮಾಜದ ಆರು ಸದಸ್ಯರನ್ನು ಒಳಗೊಂಡ ಈ ಸಮಿತಿಯ ಅಧ್ಯಕ್ಷತೆಯನ್ನು ಜ್ಯೋತಿಕಾ ಕಲ್ರಾ ವಹಿಸಲಿದ್ದಾರೆ.