ಕರ್ನಾಟಕ

karnataka

ETV Bharat / bharat

ಇಂಟರ್​ನೆಟ್​ ಹ್ಯಾಕಿಂಗ್​​: ಹಸಿರು ನ್ಯಾಯಮಂಡಳಿಯಿಂದ ಬಿಲ್ಡರ್​ಗೆ 3 ಕೋಟಿ 28 ಲಕ್ಷ ದಂಡ! - ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ಅಕ್ರಮವಾಗಿ ಸೆಕ್ಟರ್​-77 ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ಸ್ಪೇಸ್ ಕ್ಯಾನ್ಬಾಲ್ 3 ಜಿ ಬಿಲ್ಡರ್​ನಿಂದ 3 ಕೋಟಿ 28 ಲಕ್ಷ 50 ಸಾವಿರ ದಂಡ ವಸೂಲಿ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.

sdsdd
ಇಂಟರ್​ನೆಟ್​ ಹ್ಯಾಕಿಂಗ್​​,ಹಸಿರು ನ್ಯಾಯಮಂಡಳಿಯಿಂದ ಬಿಲ್ಡರ್​ಗೆ 3 ಕೋಟಿ 28 ಲಕ್ಷ ದಂಡ!?

By

Published : Feb 18, 2020, 12:55 PM IST

ನವದೆಹಲಿ / ನೋಯ್ಡಾ:ಅಕ್ರಮವಾಗಿ ಸೆಕ್ಟರ್​-77 ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ಸ್ಪೇಸ್ ಕ್ಯಾನ್ಬಾಲ್ 3 ಜಿ ಬಿಲ್ಡರ್​ನಿಂದ 3 ಕೋಟಿ 28 ಲಕ್ಷ 50 ಸಾವಿರ ದಂಡ ವಸೂಲಿ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.

ಉತ್ತರ ಪ್ರದೇಶದ ಗೌತಮ್​ ಬುದ್ಧ ನಗರದ ಈ ಬಿಲ್ಡರ್​ ಇಂಟರ್​ನೆಟ್ ಹ್ಯಾಕಿಂಗ್ ಮತ್ತು ಕೊಳಚೆ ನೀರನ್ನು ಗ್ರೀನ್ ಬೆಲ್ಟ್​ಗೆ ಅಕ್ರಮವಾಗಿ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ.ಅನಿಲ್ ಕುಮಾರ್ ಸಿಂಹ ಎನ್‌ಜಿಟಿಯ ಆದೇಶಗಳನ್ನು ಪಾಲಿಸಲಾಗುವುದು ಮತ್ತು ಬಿಲ್ಡರ್‌ನಿಂದ ಅದಷ್ಟು ಬೇಗ ದಂಡವನ್ನು ವಸೂಲಿ ಮಾಡಿ ಎನ್‌ಜಿಟಿಗೆ ತಲುಪಿಸಲಾಗುವುದು ಎಂದಿದ್ದಾರೆ.

ಈ ಪ್ರಕರಣದಲ್ಲಿ ಗಂಭೀರವಾಗಿ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ,ಯುಪಿಪಿಸಿಬಿಯ ನೋಯ್ಡಾ ಘಟಕಕ್ಕೆ ಮಾರ್ಗಸೂಚಿ ನೀಡಿದೆ. ಇದರಲ್ಲಿ ಜಿಲ್ಲಾಡಳಿತದ ಸಹಾಯ ಪಡೆಯಲು ಬಯಸಿದರೆ ಅದಕ್ಕೆ ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ಮಾಹಿತಿಯ ಪ್ರಕಾರ, ಈ ಬಿಲ್ಡರ್​ 29 ಜನವರಿ 2011 ರಂದು ಯೋಜನೆಯನ್ನು ಪ್ರಾರಂಭಿಸಿ ಡಿಸೆಂಬರ್ 2014 ರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿದ್ದ. ಇನ್ನು ಎರಡು ಬೋರ್‌ವೆಲ್‌ಗಳನ್ನು ಕೊರೆಯಿಸಿ ಮಳೆನೀರು ಕೊಯ್ಲು ಮಾಡಲು ಈತನಿಗೆ ಅವಕಾಶ ಕಲ್ಪಿಸಲಾಗಿತ್ತು.ವಿದ್ಯುತ್ ಪೂರೈಸಲು 500 ಕೆವಿ ಡೀಸೆಲ್ ಜೆನ್‌ಸೆಟ್ ಅಳವಡಿಸಲಾಗಿತ್ತು.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ವಿಷಕಾರಿ ಅನಿಲ ಹೊರ ಹೋಗಲು ವ್ಯವಸ್ಥೆ ಮಾಡಬೇಕಿತ್ತು. ಆದರೆ ಈ ನಿಯಮವನ್ನು ಮೀರಿರುವ ಕಾರಣ ಯುಪಿಪಿಸಿಬಿ ಬಿಲ್ಡರ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ABOUT THE AUTHOR

...view details