ಘಾಜಿಯಾಬಾದ್:ರಿಕ್ಷಾ ಎಳೆಯುವ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಆತನ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ಹಾಗೂ ನೆರೆಹೊರೆಯ ಜನರು ಹಿಂದೇಟು ಹಾಕಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಆಟೋ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಕೋವಿಡ್ ಹರಡುವ ಭೀತಿಯಿಂದಾಗಿ ಕುಟುಂಬಸ್ಥರು ಹಾಗೂ ನೆರೆಹೊರೆಯ ಜನರು ಅಂತಿಮ ವಿಧಿ-ವಿಧಾನ ನಡೆಸಲು ಹಿಂದೇಟು ಹಾಕಿದ್ದಾರೆ. ಇದರ ಮಾಹಿತಿ ಸಿಗುತ್ತಿದ್ದಂತೆ ಎನ್ಜಿಒವೊಂದರ ಮುಖ್ಯಸ್ಥೆಯಾಗಿರುವ ಮಮತಾ ಸಿಂಗ್ ಮುಂದೆ ನಿಂತು ಎಲ್ಲ ಕಾರ್ಯ ನಡೆಸಿದ್ದಾರೆ.