ರೋಹ್ಟಕ್ (ಹರಿಯಾಣ): ರೋಹ್ಟಕ್ನ ಮೊಖ್ರಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನವವಧುವನ್ನು ಕೆಲ ದುಷ್ಕರ್ಮಿಗಳು ಅಪಹರಿಸಿದ್ದು, ಆಕೆಯನ್ನು ಹರಿಯಾಣ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಹರಿಯಾಣದಲ್ಲಿ ನವವಧುವಿನ ಅಪಹರಣ: ಪೊಲೀಸರಿಂದ ರಕ್ಷಣೆ - ಹರಿಯಾಣದಲ್ಲಿ ನವವಧುವಿನ ಅಪಹರಣ
ನವವಧುವನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದ ಘಟನೆ ರೋಹ್ಟಕ್ನ ಮೊಖ್ರಾ ಗ್ರಾಮದಲ್ಲಿ ನಡೆದಿದೆ. ಸದ್ಯ ಆಕೆಯನ್ನು ಹರಿಯಾಣ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಹರಿಯಾಣದಲ್ಲಿ ನವವಧುವಿನ ಅಪಹರಣ
"ದುಷ್ಕರ್ಮಿಗಳು ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ವಧುವಿನ ಕುಟುಂಬ ಆರೋಪಿಸಿದೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಶಮ್ಸರ್ ಸಿಂಗ್ ತಿಳಿಸಿದ್ದಾರೆ.
ಅಪರಾಧಿಗಳನ್ನು ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.