ಇಲ್ಲಿನ ವನಸ್ಥಳಿಪುರಂ ಅಪಾರ್ಟ್ಮೆಂಟ್ನಲ್ಲಿ ನವ ವಿವಾಹಿತೆ ನಿವೇದಿತಾ ವಾಸಿಸುತ್ತಿದ್ದರು. ಕೌಟಂಬಿಕ ಕಲಹದ ಹಿನ್ನೆಲೆ ಐದು ಅಂತಸ್ತಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆರು ತಿಂಗಳ ಹಿಂದೆ ಮದುವೆ... ಕಟ್ಟಡದಿಂದ ಜಿಗಿದು ನವ ವಿವಾಹಿತೆ ಆತ್ಮಹತ್ಯೆ! - ಆತ್ಮಹತ್ಯೆ
ಹೈದರಾಬಾದ್: ಮದುವೆಯಾಗಿ ಕೇವಲ ಆರು ತಿಂಗಳಗೆ ನವ ವಿವಾಹಿತೆ ಐದು ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಕೃಪೆ: eenadu.net
ಇನ್ನು ಈ ಸುದ್ದಿ ಕುಟುಂಬಸ್ಥರಿಗೆ ತಿಳಿದಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ವನಸ್ಥಳಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.