ಕರ್ನಾಟಕ

karnataka

ETV Bharat / bharat

ತವರು ಮನೆಗೆ ಹೋಗಲು ಬಿಡದ ಗಂಡ... ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಹೆಂಡತಿ! - ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

ಕಟ್ಟಿಕೊಂಡ ಗಂಡ ತವರು ಮನೆಗೆ ಕಳುಹಿಸಲಿಲ್ಲ ಎಂದು ಗಂಡನ ಮರ್ಮಾಂಗವನ್ನೇ ಹೆಂಡತಿ ಕತ್ತರಿಸಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

Newly married Wife cut her Husband private part
ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

By

Published : Feb 21, 2020, 11:48 PM IST

Updated : Feb 22, 2020, 8:29 AM IST

ರಾಂಚಿ( ಜಾರ್ಖಂಡ್​): ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಮಧ್ಯೆ ವೈಮನಸ್ಸು ಉಂಟಾಗಿ ಗಂಡನ ಮರ್ಮಾಂಗವನ್ನೇ ಹೆಂಡತಿ ಕತ್ತರಿಸಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

ಕಳೆದ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ನವಜೋಡಿ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತಂತೆ. 22 ವರ್ಷದ ಕುಮಾರ್​ ಮಂಡಲ್​ ಮತ್ತು ದೇವಿ ನಡುವೆ ಜಗಳವಾಗಿದ್ದರಿಂದ ಕಳೆದ ವಾರ ಗ್ರಾಮದಲ್ಲಿ ರಾಜಿ ನಡೆಸಿ, ಜೊತೆಯಾಗಿ ಸಂಸಾರ ನಡೆಸುವಂತೆ ಗ್ರಾಮಸ್ಥರು ತಿಳಿಹೇಳಿದ್ದರಂತೆ.

ಈ ವೇಳೆ ಗಂಡನ ಬಳಿ ತಾನು ತವರು ಮನೆಗೆ ಹೋಗುವೆ ಎಂದು ಹೆಂಡತಿ ಕೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ಗಂಡ ಅನುಮತಿ ನೀಡಲ್ಲ. ಹೀಗಾಗಿ ಕೋಪಗೊಂಡ ಆಕೆ ಬ್ಲೇಡ್​ನಿಂದ ಗಂಡನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ ಎನ್ನಲಾಗಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸಿರುವ ಆತನನ್ನು ರಾಂಚಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

Last Updated : Feb 22, 2020, 8:29 AM IST

ABOUT THE AUTHOR

...view details