ಪಶ್ಚಿಮ ಗೋದಾವರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನವದಂಪತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭೀಮಡೋಲು ತಾಲೂಕಿನಲ್ಲಿ ನಡೆದಿದೆ.
ಮದುವೆಯಾಗಿ ನಾಲ್ಕು ದಿನಕ್ಕೇ ಶಿವನ ಪಾದ ಸೇರಿದ ನವದಂಪತಿ ಯಡ್ಲಪಲ್ಲಿ ವೆಂಕಟೇಶ್ (30) ಜೊತೆ ಮಾನಸ ನವ್ಯ (26) ಇದೇ ತಿಂಗಳು 14 ರಂದು ಮದುವೆಯಾಗಿತ್ತು. ವೆಂಕೆಟೇಶ್ ಮತ್ತು ಮಾನಸ ನವ್ಯ ಆಕೆಯ ಸಹೋದರ ಭರತ್ ಜೊತೆ ಗುಂಟೂರು ಜಿಲ್ಲೆಯ ಗೋವಾಡದಿಂದ ವಿಶಾಖ್ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಭೀಮಡೋಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಎದುರಿಗೆ ಬಂದ ಲಾರಿ ಕಾರ್ಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನವದಂಪತಿ ಜೊತೆ ಡ್ರೈವರ್ ಚಂದ್ರಶೇಖರ್ (64) ಸಹ ಮೃತ ಪಟ್ಟಿದ್ದಾರೆ.
ಮದುವೆಯಾಗಿ ನಾಲ್ಕು ದಿನಕ್ಕೇ ಶಿವನ ಪಾದ ಸೇರಿದ ನವದಂಪತಿ ಇನ್ನು ಈ ಅಪಘಾತದಲ್ಲಿ ಮಾನಸ ನವ್ಯ ಸಹೋದರ ಭರತ್ಗೆ ಗಂಭೀರ ಗಾಯಗಳಾಗಿ ರಸ್ತೆಯಲ್ಲಿ ನರಳುತ್ತಿದ್ದರು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಡಿಎಸ್ಪಿ ದಿಲೀಪ್ ಚರಣ್ ಸ್ಥಳೀಯರ ಸಹಾಯದಿಂದ ಭರತ್ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.