ಖಮ್ಮಂ(ತೆಲಂಗಾಣ): ತೆಲಂಗಾಣದ ಖಮ್ಮಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 16 ದಿನ ನವಜಾತ ಶಿಶುವಿನ ಕಳ್ಳತನ ನಡೆದಿದೆ. ಅಪರಿಚಿತ ಮಹಿಳೆಯೊಬ್ಬಳು ಆಸ್ಪತ್ರೆಗೆ ಬಂದು ನವಜಾತ ಶಿಶುವನ್ನ ಕದ್ದು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವು..! - ತೆಲಂಗಾಣದಲ್ಲಿ ನವಜಾತ ಶಿಶು ಕಳ್ಳತನ
ಆಸ್ಪತ್ರೆಗೆ ಬಂದ ಮಹಿಳೆ ನವಜಾತ ಶಿಶುವಿನ ತಾಯಿ ಜತೆ ಮಾತನಾಡಿ ಎದೆಹಾಲು ಉಣಿಸುವುದಾಗಿ ಹೇಳಿ ಮಗು ಪಡೆದಿದ್ದಳು. ಬಳಿಕ ಅಲ್ಲಿಂದ ಶಿಶುವಿನ ಜೊತೆ ಪರಾರಿಯಾಗಿದ್ದಾಳೆ.
ನವಜಾತ ಶಿಶು
ಆಸ್ಪತ್ರೆಗೆ ಬಂದ ಮಹಿಳೆ ನವಜಾತ ಶಿಶುವಿನ ತಾಯಿ ಜತೆ ಮಾತನಾಡಿ ಎದೆಹಾಲು ಉಣಿಸುವುದಾಗಿ ಹೇಳಿ ಮಗು ಪಡೆದಿದ್ದಳು. ಬಳಿಕ ಅಲ್ಲಿಂದ ಶಿಶುವಿನ ಜೊತೆ ಪರಾರಿಯಾಗಿದ್ದಾಳೆ. ಈ ಬಗ್ಗೆ ದೂರು ಸ್ವೀಕರಿಸಿರುವ ಪೊಲೀಸರು ಮಹಿಳೆ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಆಸ್ಪತ್ರೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನ ಪೊಲೀಸರು ವೀಕ್ಷಣೆ ಮಾಡುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಮಹಿಳೆ ಬಂಧನಕ್ಕೆ ಬಲೆ ಬೀಸಿದ್ದಾರೆ.