ನ್ಯೂಯಾರ್ಕ್ :ಕ್ರಿಸ್ಮಸ್ ಹಬ್ಬ ಬಂತು ಅಂದ್ರೆ ವಿದೇಶಗಳಲ್ಲಿ ಸಂಭ್ರಮ - ಸಡಗರ ಮನೆ ಮಾಡ್ತಾ ಇತ್ತು. ಆದ್ರೆ ಈ ಬಾರಿ ಕೊರೊನಾದಿಂದ ಇಡೀ ವಿಶ್ವವೇ ಲಾಕ್ ಆದ ಪರಿಣಾಮ ಜನರೆಲ್ಲಾ ಮನೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕೊರೊನಾದಿಂದ ಸ್ವಲ್ಪ ಚೇತರಿಕೆ ಕಂಡಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ.
ಸಾಂಪ್ರದಾಯಿಕ ಕ್ರಿಸ್ಮಸ್ ಟ್ರೀ ನೋಡಲು ಸಾಲುಗಟ್ಟಿ ನಿಂತ ಅಮೆರಿಕನ್ನರು! - ಸಾಂಪ್ರದಾಯಿಕ ಕ್ರಿಸ್ಮಸ್ ಟ್ರೀ
ನ್ಯೂಯಾರ್ಕ್ನ ರಾಕ್‌ಫೆಲ್ಲರ್ ಕೇಂದ್ರದಲ್ಲಿರುವ ಐಕಾನಿಕ್ ಕ್ರಿಸ್‌ಮಸ್ ಟ್ರೀ ನೋಡಲು ನೂರಾರು ಮಂದಿ ನ್ಯೂಯಾರ್ಕ್ ಜನರು ತಮ್ಮ ಪ್ರೀತಿ ಪಾತ್ರರ ಜೊತೆ ಸಾಲಾಗಿ ನಿಂತಿದ್ದಾರೆ.
ನ್ಯೂಯಾರ್ಕ್
ನ್ಯೂಯಾರ್ಕ್ನಲ್ಲಿ ಇಷ್ಟು ದಿನ ಮನೆಯಲ್ಲೇ ಇದ್ದ ಜನ ಇದೀಗ ಕ್ರಿಸ್ಮಸ್ ಕಾರಣದಿಂದ ಹೊರಗಡೆ ಬರುತ್ತಿದ್ದಾರೆ. ನ್ಯೂಯಾರ್ಕ್ನ ರಾಕ್ ಫೆಲ್ಲರ್ ಕೇಂದ್ರದಲ್ಲಿರುವ ಸಾಂಪ್ರದಾಯಿಕ ಕ್ರಿಸ್ಮಸ್ ವೃಕ್ಷವನ್ನು ನೋಡಲು ನೂರಾರು ಜನರು ಸಾಲುಗಟ್ಟಿ ನಿಂತಿದ್ದಾರೆ.
ಕ್ರಿಸ್ಮಸ್ ಟ್ರೀ ನೋಡಲು ಬರುವ ವೀಕ್ಷಕರು ಸಾಮಾಜಿಕ ಅಂತರ ಹಾಗೂ ಕೆಲವೊಂದು ಸೂಚನೆಗಳನ್ನು ಅನುಸರಿಸಬೇಕಾಗಿದೆ.