ವಾರಂಗಲ್ (ತೆಲಂಗಾಣ):ಗೋರೆಕುಂಟ ಘಟನೆಯಲ್ಲಿ ಹೊಸ ಟ್ವಿಸ್ಟ್ ಹೊರಹೊಮ್ಮಿದೆ. ಕೊಲೆ ಆರೋಪಿ ಸಿಕ್ಕಿಬಿದ್ದಿದ್ದು ಅಲ್ಲಿ ಕೊಲೆ ಆಗಿದ್ದು 9 ಮಂದಿಯಷ್ಟೇ ಅಲ್ಲ, ಅದಕ್ಕೂ ಮುನ್ನ ಓರ್ವ ಯುವತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಸಂಜಯ್ ಪೊಲೀಸರಿಗೆ ಬಹಿರಂಗಪಡಿಸಿದ್ದಾನೆ.
ವಾರಂಗಲ್ ಸಾವಿನ ಬಾವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್... ಆರೋಪಿ ಬಾಯ್ಬಿಟ್ಟ ಭಯಾನಕ ಸತ್ಯ! - ಬಾವಿ ಹತ್ಯೆಗಳ ಪ್ರಕರಣಕ್ಕೆ ಟ್ವಿಸ್ಟ್
ಮಕ್ಸೂದ್ನ ಬಂಧುವಾಗಿದ್ದ ಯುವತಿಯೊಬ್ಬಳು ಆರೋಪಿ ಸಂಜಯ್ನೊಂದಿಗೆ ಆತ್ಮೀಯವಾಗಿದ್ದಳು. ಈಕೆ ಕೂಡ ಕೆಲ ದಿನಗಳ ಹಿಂದೆ ಕಣ್ಮರೆಯಾಗಿದ್ದಾಳೆ. 9 ಮಂದಿಯ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿದ್ದ ವೇಳೆ, ಮಾರ್ಚ್ 8ರಂದು ಆ ಯುವತಿಯನ್ನು ಕೂಡ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ವಾರಂಗಲ್ ಬಾವಿ
ಕೊಲೆಯಾಗಿರುವ ಮಕ್ಸೂದ್ನ ಬಂಧುವಾಗಿದ್ದ ಯುವತಿಯೊಬ್ಬಳು ಆರೋಪಿ ಸಂಜಯ್ನೊಂದಿಗೆ ಆತ್ಮೀಯವಾಗಿದ್ದಳು. ಈಕೆ ಕೂಡ ಕೆಲ ದಿನಗಳಿಂದ ಕಣ್ಮರೆಯಾಗಿದ್ದಳು. 9 ಮಂದಿಯ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿದ್ದ ವೇಳೆ, ಮಾರ್ಚ್ 8ರಂದು ಆ ಯುವತಿಯನ್ನು ಕೂಡ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ತಾನು ಕೋಲ್ಕತ್ತಾಗೆ ಕರೆದೊಯ್ಯುತ್ತಿದ್ದೇನೆ ಎಂದು ಹೇಳಿ ಯುವತಿಯನ್ನು ರೈಲಿನಿಂದ ತಳ್ಳಿ ಹತ್ಯೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ವಿಚಾರವನ್ನು ಮಕ್ಸೂದ್ ಕುಟುಂಬ ಪೊಲೀಸರಿಗೆ ಹೇಳುತ್ತಾರೆಂಬ ಭಯದಿಂದ 9 ಮಂದಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.