ಲಾಕ್‌ಡೌನ್ ಕ್ರಮಗಳನ್ನು ಸರಳೀಕರಣಗೊಳಿಸುವ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಜಗತ್ತು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ‘ಹೊಸ ಪರಿಸ್ಥಿತಿ’ ವಿಚಾರದಲ್ಲಿ ವಿಷಯಗಳು ಎಂದಿಗೂ ಒಂದೇ ಆಗಿರುವುದಿಲ್ಲ. ಒಂದೆಡೆ ಸಾರಿಗೆ, ಶಾಲೆಗಳು, ವ್ಯವಹಾರ ಮತ್ತು ಮನರಂಜನೆ ಸೇರಿದಂತೆ ಸುರಕ್ಷಿತ ಚಟುವಟಿಕೆಗಳಿಗೆ ವಿಶ್ವದ ವಿವಿಧ ಭಾಗಗಳಲ್ಲಿನ ಆಡಳಿತವರ್ಗ ಸೂಕ್ತವಾದ ವಾತಾವರಣವನ್ನು ಕಲ್ಪಿಸಿಕೊಡಬೇಕಾಗುತ್ತದೆ. ಮತ್ತೊಂದೆಡೆ, ಸಾಮಾನ್ಯ ಜನರು ಸಹ ಅಧಿಕಾರಿ ವರ್ಗದ ಸೂಚನೆಗಳನ್ನು ಪಾಲಿಸಬೇಕು ಮತ್ತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕು. ಆದರೆ ಜಪಾನ್‌ನಲ್ಲಿ ಥೀಮ್ ಪಾರ್ಕ್‌ಗಳನ್ನು ಜುಲೈನಲ್ಲಿ ಮತ್ತೆ ತೆರೆದು ಒಂದು ವಿಶಿಷ್ಟ ಉದಾಹರಣೆ ಮುನ್ನುಡಿಯಾಗುತ್ತದೆ. ಥೀಮ್ ಪಾರ್ಕ್‌ಗಳನ್ನು ಕೋವಿಡ್ -19 ಸಾಂಕ್ರಾಮಿಕ ಸೋಂಕು ಎದುರಿಸುವ ನಿಟ್ಟಿನಲ್ಲಿ ಫೆಬ್ರವರಿ ಆರಂಭದಲ್ಲೇ ಮುಚ್ಚಲಾಗಿತ್ತು.
ಜಪಾನ್‌ನ ಪ್ರಮುಖ ಥೀಮ್ ಪಾರ್ಕ್ ನಿರ್ವಾಹಕರ ತಂಡ ಪ್ರವಾಸಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಯಾವ ರೀತಿ ಖಚಿತಪಡಿಸಿಕೊಳ್ಳುವುದು ಎಂಬುದರ ಕುರಿತು ಒಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ನಡವಳಿಗಳನ್ನೊಳಗೊಂಡಿರುವ ಮಾರ್ಗಸೂಚಿಗಳಲ್ಲಿ ಸಾಮಾಜಿಕ ಅಂತರ ಮತ್ತು ಹೆಚ್ಚಿದ ಶುಚಿತ್ವ ಕಾಯ್ದುಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್ ಮತ್ತು ಮುಖಗವಸು ಧರಿಸುವುದು ಒಳಗೊಂಡಿವೆ. ಪೂರ್ವ ಮತ್ತು ಪಶ್ಚಿಮ ಜಪಾನ್ ಥೀಮ್ ಪಾರ್ಕ್ ಸಂಸ್ಥೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ ಜಪಾನ್‌ನ 30ಕ್ಕೂ ಹೆಚ್ಚು ಪ್ರಮುಖ ಮನೋರಂಜನಾ ಉದ್ಯಾನವನವನ್ನು ನಿರ್ವಹಿಸುತ್ತಿದೆ. “ಹೊಸ ಶೈಲಿಯ ಗ್ರಾಹಕ ಸೇವೆಯಂತೆ, ನೀವು ಮುಖಗವಸು ಧರಿಸಿದ ಸಂದರ್ಭದಲ್ಲಿಯೂ ಕೂಡ, ನೀವು ಗ್ರಾಹಕರ ಜತೆ ಸಂವಹನ ನಡೆಸಲು ಕಣ್ಣುಗಳು ಮಿಟಕಿಸುವುದು, ಕೈ ಸನ್ನೆಗಳು ಇತ್ಯಾದಿಗಳ ಸನ್ನೆಯನ್ನು ಬಳಸಬಹುದು”. ಸಂಭಾಷಣೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರಿಂದ ಗ್ರಾಹಕ ಸೇವೆಯ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ‘ಹೊಸ ಸಾಮಾನ್ಯ’ಚಿತ್ರಣ ಖಂಡಿತವಾಗಿಯೂ ಸನ್ನೆಗಳ ಬಗ್ಗೆ ಹೆಚ್ಚು ಮಹತ್ವ ನೀಡಿ ಮತ್ತು ಪದಗಳನ್ನು ಉಚ್ಚರಿಸುವ ಕುರಿತು ಕಡಿಮೆ ತಿಳಿಸುತ್ತದೆ.
ಥೀಮ್ ಪಾರ್ಕ್ನ ಇನ್ನೊಂದು ಮನವಿಯನ್ನು ಸಂದರ್ಶಕರಿಗೆ ಪಾಲಿಸುವುದು ಕೂಡ ಕಷ್ಟಸಾಧ್ಯವಾಗಬಹುದು. ರೋಲರ್ ಕೋಸ್ಟರ್ ಸವಾರಿ ಮಾಡುವಾಗ ಮಾಸ್ಕ್ ಧರಿಸಿರಬೇಕು ಎಂದು ವಿನಂತಿಸಲಾಗಿದೆ. ಇದು ಮುಖ್ಯವಾಗಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನವಾಗಿದೆ. ಮಾತನಾಡುವ ಸಂದರ್ಭದಲ್ಲಿ ಗಂಟೆಗೆ 120 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಬಾಯಿಯಿಂದ ಬೀಳುವ ಡ್ರಾಪ್ಲೆಟ್ಗಳನ್ನು ನಿರ್ಬಂಧಿಸುವ ಸಲುವಾಗಿ ಮಾಡಿರುವ ಪ್ರಯತ್ನ ಇದಾಗಿದೆ.
ವಾಸ್ತವವಾಗಿ, ವಿಶ್ವದ ವಿವಿಧ ಭಾಗಗಳಲ್ಲಿರುವ ಕೆಲವು ಪ್ರಸಿದ್ಧ ರೋಲರ್ ಕೋಸ್ಟರ್‌ಗಳ ಹೆಸರುಗಳು ಸಹ ಮಾತಿನ ಪದಕ್ಕೆ ಪೂರಕವಾಗಿದೆ: ಉದಾಹರಣೆಗೆ, ಜರ್ಮನಿಯ ರೈನ್‌ಲ್ಯಾಂಡ್-ಪ್ಯಾಲಟಿನೇಟ್‌ನ ಹ್ಯಾಸ್‌ಲೋಚ್‌ನ ಹಾಲಿಡೇ ಪಾರ್ಕ್‌ನಲ್ಲಿರುವ ಸ್ಟೀಲ್ ರೋಲರ್ ಕೋಸ್ಟರ್ ‘ಸ್ಕೈ ಸ್ಕ್ರೀಮ್’ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾದ ವೇಲೆನ್ಶಿಯಾದ ಸಿಕ್ಸ್ ಫ್ಲ್ಯಾಗ್ಸ್ ಮ್ಯಾಜಿಕ್ ಮೌಂಟೇನ್‌ನಲ್ಲಿರುವ ಸ್ಕ್ರೀಮ್ ರೋಲರ್ ಕೋಸ್ಟರ್ ಆಗಿದೆ. ಇದು ನಿಸ್ಸಂಶಯವಾಗಿ, ನೂರಾರು ಅಡಿಗಳ ಮೇಲಿಂದ ಧಮುಕುವ ಸಂದರ್ಭದಲ್ಲಿ ಮಾತನಾಡಬಾರದು ಮತ್ತು ಕಿರುಚಾಡಬಾರದು ಎನ್ನುವ ನಿಬಂಧನೆಯನ್ನು ಹೊಂದಿದ್ದು, ಅವುಗಳನ್ನು ಪಾಲಿಸುವುದು ಅಷ್ಟು ಸುಲಭವಲ್ಲ. ಜಪಾನ್‌ನ ಫ್ಯೂಜಿ-ಕ್ಯೂ ಹೈಲ್ಯಾಂಡ್ ಥೀಮ್ ಪಾರ್ಕ್ ಸಹ ಒಂದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದು ಉದ್ಯಾನದ ಇಬ್ಬರು ಅಧಿಕಾರಿಗಳು ಒಮ್ಮೆಯೂ ಕಿರುಚಾಡದೆ ಉದ್ಯಾನದ ಫ್ಯೂಜಿಯಾಮಾ ರೋಲರ್ ಕೋಸ್ಟರ್‌ನಲ್ಲಿ ತಮ್ಮೊಳಗೆ ನೋವು ಅನ್ನು ನುಂಗಿಕೊಂಡಂತೆ ಭಾಸವಾಗುತ್ತದೆ. "ದಯವಿಟ್ಟು ನಿಮ್ಮ ಹೃದಯದೊಳಗೆ ಕಿರುಚಿಕೊಳ್ಳಿ" ಎಂಬ ಸಂದೇಶದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ರೋಲರ್ ಕೋಸ್ಟರ್ ಸವಾರಿಯ ಸಮಯದಲ್ಲಿ ಜನರು “ ಇದನ್ನು ಮುಖ್ಯ ಸವಾಲಾಗಿ “ತೆಗೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.