ಕರ್ನಾಟಕ

karnataka

ETV Bharat / bharat

ಕೇರಳ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ - ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್

ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ನೇಮಕ ಮಾಡಿದ್ದಾರೆ.

ರಾಜ್ಯಪಾಲರ ನೇಮಕ

By

Published : Sep 1, 2019, 1:14 PM IST

ನವದೆಹಲಿ:ದೇಶದ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

ಹಿಮಾಚಲ ಪ್ರದೇಶದ ರಾಜ್ಯಪಾಲ ಕಾಲ್​​ರಾಜ್ ಮಿಶ್ರಾರನ್ನು ರಾಜಸ್ಥಾನದ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ರಾಜಸ್ಥಾನದ ಹಾಲಿ ಗವರ್ನರ್ ಕಲ್ಯಾಣ್ ಸಿಂಗ್​ ಜಾಗಕ್ಕೆ ಕಾಲ್​ರಾಜ್ ಮಿಶ್ರಾ ನೇಮಕವಾಗಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆ ಡಾ. ತಮಿಳಿಸಾಯಿ ಸೌಂದರ ರಾಜನ್​ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇ.ಎಸ್​.ಎಲ್. ನರಸಿಂಹನ್ ಸ್ಥಾನಕ್ಕೆ ಸೌಂದರ ರಾಜನ್ ಆಗಮಿಸಿದ್ದಾರೆ.

ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ಭಗತ್ ಸಿಂಗ್ ಕೋಶ್ಯಾರಿ ನೇಮಕವಾಗಿದ್ದು, ವಿದ್ಯಾಸಾಗರ್ ರಾವ್ ಹುದ್ದೆ ತೊರೆಯಲಿದ್ದಾರೆ.

ಆರಿಫ್​ ಮೊಹಮ್ಮದ್ ಖಾನ್ ಕೇರಳ ರಾಜ್ಯಕ್ಕೆ ಗವರ್ನರ್ ಆಗಿ ನೇಮಿಸಲಾಗಿದ್ದು, ಪಿ.ನರಸಿಂಹನ್ ಹುದ್ದೆಗೆ ಆರಿಫ್​ ನೇಮಕಗೊಂಡಿದ್ದಾರೆ.

ಹಿಮಾಚಲ ಪ್ರದೇಶದ ನೂತನ ಗವರ್ನರ್ ಆಗಿ ಬಂಡಾರು ದತ್ತಾತ್ರೇಯರನ್ನು ನೇಮಿಸಿ ರಾಷ್ಟ್ರಪತಿ ರಾಮ​ನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details