ಆಗ್ರಾ(ಉತ್ತರ ಪ್ರದೇಶ):ಪ್ರೇಮಿಗಳ ಗುರುತು ಎಂದೇ ಖ್ಯಾತಿ ಪಡೆದಿರುವ ತಾಜ್ ಮಹಲ್ನ್ನು ನೋಡುತ್ತಾ 150 ಅಡಿಗಳ ಎತ್ತರದಲ್ಲಿ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಎರಡನೇ ಫ್ಲೈ ಡೈನಿಂಗ್ ರೆಸ್ಟೊರೆಂಟ್ ಉತ್ತರಪ್ರದೇಶದ ಆಗ್ರಾದಲ್ಲಿ ಸ್ಥಾಪನೆಯಾಗಿದೆ.
ಈ ರೆಸ್ಟೋರೆಂಟ್ ಇರೋದೆಲ್ಲಿ?
ಆಗ್ರಾದಲ್ಲಿ ತಾಜ್ಮಹಲ್ ಸಮೀಪದಲ್ಲಿರುವ ಕಲಾಕುರ್ತಿ ಮೈದಾನದಲ್ಲಿ ಈ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು 150 ಅಡಿಗಳ ಎತ್ತರದಲ್ಲಿ ತಾಜ್ ಮಹಲ್ ನೋಡುತ್ತಲೇ ಊಟ ಸವಿಯಬಹುದಾಗಿದೆ.
ಸಮಯ, ಆಸನಗಳೆಷ್ಟು?
ಇದು ಭಾರತದಲ್ಲಿ ಎರಡನೇ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಆಗಿದೆ. ದೊಡ್ಡದಾದ ಆಸನದ ಮೇಲೆ ಡೈನಿಂಗ್ ಟೇಬಲ್ ಸಿದ್ಧಪಡಿಸಿ ಒಂದೇ ಬಾರಿ 24 ಜನರು ಕುಳಿತುಕೊಂಡು ಊಟ ಸವಿಯಬಹುದಾಗಿದೆ. ಸುಮಾರು 45 ನಿಮಿಷಗಳ ಕಾಲ ಈ ಫ್ಲೈ ಡೈನಿಂಗ್ನಲ್ಲಿ ಊಟ ಮಾಡಬಹುದಾಗಿದೆ.
ಇದು ಹೇಗೆ ಕಾರ್ಯ ನಿರ್ವಹಿಸುತ್ತೆ...
ಈ ಡೈನಿಂಗ್ ಮೇಲೆ ಕುಳಿತ ನಂತರ ಹೈಡ್ರಾಲಿಕ್ ಕ್ರೇನ್ ಮೂಲಕ 150 ಅಡಿಗಳ ಎತ್ತರದಷ್ಟು ಕೊಂಡೊಯ್ಯುತ್ತೆ. ರೋಪ್ಸ್ ಸಹಾಯದಿಂದ ಈ ಡೈನಿಂಗ್ ಆಕಾಶದಲ್ಲಿ ವಿಹರಿಸುತ್ತೆ. ಬಳಿಕ ಅತಿಥಿಗಳಿಗೆ ಭೋಜದ ಸೇವೆ ನೀಡುತ್ತೇವೆ. ಬೇಕಾದ ರಕ್ಷಣಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದೇವೆ ಎನ್ನುತ್ತಾರೆ ರೆಸ್ಟೋರೆಂಟ್ನ ನಿರ್ದೇಶಕ ಮನೋಜ್ ಅಗರ್ವಾಲ್ ಮಾಧ್ಯಮಕ್ಕೆ ಹೇಳಿದ್ದಾರೆ.
ಒಟ್ಟಿನಲ್ಲಿ ಈ ರೆಸ್ಟೋರೆಂಟ್ನಿಂದ ಪ್ರವಾಸಿಗರು ತಾಜ್ಮಹಲ್ ನೋಡುತ್ತಾ ಆಗಸದಲ್ಲಿ ಊಟ ಸವಿಯಬಹುದಾಗಿದೆ. ವಿನೂತನ ಶೈಲಿಯ ಈ ರೆಸ್ಟೋರೆಂಟ್ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವಲ್ಲಿ ಯಾವುದೇ ಅನುಮಾನಗಳಿಲ್ಲ.