ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಹೌಜ್ ಖಾಜಿ ಪ್ರದೇಶದಿಂದ ಸಂಶಯಾಸ್ಪದ ರೀತಿಯಲ್ಲಿ ಇಬ್ಬರು ಯುವಕ ಮೃತದೇಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮಹಿಳೆ ವಿಚಾರವಾಗಿ ಈ ಘಟನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮಾಹಿತಿ ಪ್ರಕಾರ, ಸಹಲ್ ಕುಟುಂಬ ಚಾವಡಿ ಮಾರುಕಟ್ಟೆಯ ಚುಡಿವಾಲಾ ಪ್ರದೇಶದಲ್ಲಿ ವಾಸವಾಗಿತ್ತು. ಸಹಲ್ ಮದ್ಯವ್ಯಸನಿ ಆಗಿದ್ದನು. ಹೆಂಡತಿ ನಮ್ರಾಳ ಮೇಲೆ ಆಗಾಗ ಹಲ್ಲೆ ಮಾಡುತ್ತಿದ್ದನು. ಇದೇ ಕಾರಣಕ್ಕಾಗಿ ಆಕೆ ಕಳೆದ ತಿಂಗಳು ತವರು ಮನೆ ಸೇರಿಕೊಂಡಿದ್ದಳು. ಇದಾದ ಬಳಿಕ ಕಳೆದ ಭಾನುವಾರ ಸಹಲ್ ಮೃತದೇಹ ಫ್ಯಾನ್ನಲ್ಲಿ ನೇತು ಬಿದ್ದಿದ್ದು, ಮತ್ತೋರ್ವ ವ್ಯಕ್ತಿ ಅರ್ಷದ್ ಮೃತದೇಹ ನೆಲದ ಮೇಲೆ ಬಿದ್ದಿರುವುದು ಬಹಿರಂಗಗೊಂಡಿದೆ.
ಮೃತ ಸಹಲ್ ಹೆಂಡತಿ ನಮರ್ ಮಾತು ಪ್ರಾಥಮಿಕ ವಿಚಾರಣೆ ಪ್ರಕಾರ, ಇಮ್ರಾನ್ ಮೃತ ಸಹಲ್ ಪತ್ನಿ ಜತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದನು. ಇದೇ ವಿಚಾರವಾಗಿ ಮೇಲಿಂದ ಮೇಲೆ ಅನೇಕ ಸಲ ಜಗಳ ಸಹ ನಡೆದಿತ್ತು. ಭಾನುವಾರ ರಾತ್ರಿ ಕೂಡ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಇಮ್ರಾನ್ನನ್ನ ಸಹಲ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತದನಂತರ ಆತನ ಕುಟುಂಬಸ್ಥರು ಬಂದು ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ ಭಯದಲ್ಲೇ ಸಹಲ್ ಕೂಡ ಫ್ಯಾನ್ಗೆ ನೇಣು ಬಿಗಿದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಎರಡು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.