ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಜುಲೈ 26ರ ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ 'ವಿಕ್ಟರಿ ರನ್' ಆಯೋಜಿಸಲಾಗಿತ್ತು. ನಗರದ ವಿಜಯ ಚೌಕ್ ಬಳಿ ಲೆಫ್ಟಿನೆಂಟ್ ಜನರಲ್ ಆಶ್ವನಿ ಕುಮಾರ್ ರನ್ಗೆ ಚಾಲನೆ ನೀಡಿದ್ರು.
ಕಾರ್ಗಿಲ್ ವಿಜಯೋತ್ಸವ: ರಾಷ್ಟ್ರ ರಾಜಧಾನಿಯಲ್ಲಿ 'ವಿಕ್ಟರಿ ರನ್' - undefined
ಪಾಕಿಸ್ತಾನ ವಿರುದ್ಧ 1999ರ ಕಾರ್ಗಿಲ್ ಕದನದಲ್ಲಿನ ವಿಜಯದ ಸಂಕೇತವಾಗಿ ರಾಷ್ಟ್ರ ರಾಜಧಾನಿಯಲ್ಲಿ 'ವಿಕ್ಟರಿ ರನ್' ಕಾರ್ಯಕ್ರಮ ನಡೆಯಿತು.
ಪಾಕಿಸ್ತಾನ ವಿರುದ್ಧ 1999ರ ಕಾರ್ಗಿಲ್ ಕದನದಲ್ಲಿನ ವಿಜಯದ ಸಂಕೇತವಾಗಿ ನಡೆದ 'ವಿಕ್ಟರಿ ರನ್'ನಲ್ಲಿ ಸಾವಿರಾರು ಜನ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಇನ್ನು ಜುಲೈ 20ರಂದು 'ವಿಕ್ಟರಿ ಫ್ಲೇಮ್' ಮನಾಲಿಗೆ ತಲುಪಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜುಲೈ 14ರಂದು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ 'ವಿಕ್ಟರಿ ಫ್ಲೇಮ್'ಗೆ ಚಾಲನೆ ನೀಡಿದ್ದರು. ಫ್ಲೇಮ್ ಕಾರ್ಗಿಲ್ ವಿಜಯ ದಿವಸವಾದ ಜುಲೈ 26ರಂದು ಕಾರ್ಗಿಲ್ ತಲುಪಲಿದೆ.
'ವಿಕ್ಟರಿ ಫ್ಲೇಮ್' ರೋಹ್ಟಾಂಗ್ ಲಾ ಬಾರಾ-ಲಾಚಾ ಲಾ, ನಾಕಿ ಲಾ, ಲಾಚುಲುಂಗ್ ಲಾ ಮತ್ತು ಟ್ಯಾಂಗ್ಲಾಂಗ್ ಲಾ ಮೂಲಕ ಕಾರ್ಗಿಲ್ಗೆ ತಲುಪಲಿದೆ. ಇನ್ನು ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ತೆರಳಿ ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದ್ದರು.