ಕರ್ನಾಟಕ

karnataka

ETV Bharat / bharat

ಐಎಎಸ್​ ಪಾಸ್​ ಆಗಲಿಲ್ಲ ಅಂತಾ ಮೆಟ್ರೋ ಮುಂದೆ ಜಿಗಿದ ಯುವಕ! - ಇಂಡಿಯನ್​ ಸಿವಿಲ್​ ಸರ್ವಿಸ್​ ಪರೀಕ್ಷೆ

ಐಎಎಸ್​ ಪರೀಕ್ಷೆಯಲ್ಲಿ ಪಾಸ್​​ ಆಗಲಿಲ್ಲ ಎಂಬ ಕಾರಣಕ್ಕೆ ಮನನೊಂದ 23 ವರ್ಷದ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

IAS exam did not pass, engineer jumped in front of metro
IAS exam did not pass, engineer jumped in front of metro

By

Published : Jan 21, 2020, 4:30 AM IST

Updated : Jan 21, 2020, 7:16 AM IST

ನವದೆಹಲಿ:ಯುಪಿಎಸ್​ಸಿ​ ಪರೀಕ್ಷೆಯ ತಯಾರಿ ನಡೆಸ್ತಿದ್ದ ಎಂಜಿನಿಯರ್ ಪದವೀಧರ​ ಯುವಕನೋರ್ವ ಪರೀಕ್ಷೆಯಲ್ಲಿ ಪಾಸ್​ ಆಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ನವದೆಹಲಿಯ ಕರೋಲ್​ ಬಾಗ್​ ಮೆಟ್ರೋ ಸ್ಟೇಷನ್​ನಲ್ಲಿ ಈ ಘಟನೆ ನಡೆದಿದೆ. ಯುವಕ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿಯುತ್ತಿದ್ದಂತೆ ಅದನ್ನು ನೋಡಿದ ಚಾಲಕ ತಕ್ಷಣವೇ ತುರ್ತು ಬ್ರೇಕ್​ ಹಾಕಿದ್ದಾನೆ. ಹೀಗಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮೆಟ್ರೋ ಸ್ಟೇಷನ್​​​​​

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ವಿಕ್ರಮ್​ ಪರವಾಲ್​​, ಸೋಮವಾರ ಬೆಳಗ್ಗೆ ಮೆಟ್ರೋಗೆ 24 ವರ್ಷದ ಯುವಕ ಜಿಗಿದಿದ್ದು, ಈ ವೇಳೆ ಚಾಲಕ ತುರ್ತು ಬ್ರೇಕ್​ ಹಾಕಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಸಣ್ಣಪುಟ್ಟ ಗಾಯವಾಗಿದ್ದು, ದಿನದಯಾಳ್​ ಉಪಾಧ್ಯಾಯ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಐಎಎಸ್​ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಈ ಯುವಕ 2019ರ ಪರೀಕ್ಷೆಯಲ್ಲಿ ಫೇಲ್​ ಆಗಿದ್ದನಂತೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದ ಎಂದು ತಿಳಿದು ಬಂದಿದೆ.

Last Updated : Jan 21, 2020, 7:16 AM IST

ABOUT THE AUTHOR

...view details