ಗಾಜಿಯಾಬಾದ್: ವ್ಯಕ್ತಿಯೋರ್ವ ಬೀದಿನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಘಟನೆ ಇಲ್ಲಿನ ಮೋದಿನಗರ ಪ್ರದೇಶದ ಕದ್ರಾಬಾದ್‌ನಲ್ಲಿ ನಡೆದಿದೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಾಯಿಯನ್ನು ಮನ ಬಂದಂತೆ ಥಳಿಸಿ ಕೊಂದು ದರದರನೆ ಎಳೆದೊಯ್ದ ವ್ಯಕ್ತಿ: ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ
ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ವ್ಯಕ್ತಿಯೋರ್ವ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ನಾಯಿಗೆ ಅಮಾನುಷವಾಗಿ ಹೊಡೆದ ವ್ಯಕ್ತಿ
ಇನ್ನು ನಾಯಿಯನ್ನು ಹೊಡೆದ ಬಳಿಕ ಕೆಲ ದೂರ ಅದನ್ನು ಎಳೆದೊಯ್ದಿದ್ದಾನೆ. ಸದ್ಯ ಪೊಲೀಸರು ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವಿಡಿಯೋ ಆಧರಿಸಿ ಆರೋಪಿಯನ್ನು ಗುರುತಿಸಿಲಾಗುತ್ತಿದೆ.
ಯಾವುದೇ ಪ್ರಾಣಿಗಳ ಮೇಲೆ ಇಂತಹ ಕ್ರೌರ್ಯ ಎಸಗಿದರೆ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತದೆ.