ಗುವಾಹಟಿ (ಅಸ್ಸೋಂ):ನಾನು ಹೊಸ ಪಕ್ಷವನ್ನು ರಚಿಸುವ ಕುರಿತು ಎಲ್ಲೂ ಹೇಳಿಲ್ಲ ಎಂದು ಅಸ್ಸೋಂನ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ತರುಣ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.
ತರುಣ್ ಗೊಗೊಯ್ ಹೊಸ ಪಕ್ಷವನ್ನು ರಚಿಸುವ ಕುರಿತು ಹೇಳಿಕೆ ನೀಡಿದ್ದಾರೆ ಎಂಬ ವದಂತಿಗೆ ಇಂದು ಮಾಧ್ಯಮದವರಿಗೆ ಪ್ರತಿಕ್ರಯಿಸಿದ ಅವರು, ನಾನು ಹೊಸ ಪಕ್ಷವನ್ನು ರಚಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಕೆಲವು ಸಂಸ್ಥೆಗಳು ಹೊಸ ರಾಜಕೀಯ ಪಕ್ಷವನ್ನು ರಚಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಹೇಳಿದರು, ಅದಕ್ಕೆ ಪ್ರತಿಯಾಗಿ ಹೊಸ ಪಕ್ಷಗಳಿಗೆ ಸ್ವಾಗತ ನೀಡುತ್ತೇನೆ ಎಂದು ಹೇಳಿದ್ದಾನೆ. ಹಾಗೂ ಸಿಎಎಯನ್ನು ವಿರೋಧಿಸಲು ಮತ್ತು ಬಿಜೆಪಿಯನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.