ಕರ್ನಾಟಕ

karnataka

ETV Bharat / bharat

' ಮುನ್ನೆಚ್ಚರಿಕೆ ವಹಿಸಿ ಆದ್ರೆ ಆತಂಕಕ್ಕೊಳಗಾಗಬೇಡಿ’: ದೇಶವಾಸಿಗಳಿಗೆ ನಮೋ ಮನವಿ

ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಮಾರಕ ಸೋಂಕಿನಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.

PM
ಪ್ರಧಾನಿ ನರೇಂದ್ರ ಮೋದಿ

By

Published : Mar 21, 2020, 7:46 PM IST

ನವದೆಹಲಿ: ವಿಶ್ವವ್ಯಾಪಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭಯಭೀತರಾಗದೇ ಮಾರಕ ಸೋಂಕಿನಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಒತ್ತಾಯಿಸಿದ್ದಾರೆ.

ಮುನ್ನೆಚ್ಚರಿಕೆ ಎಂದೂ ಆತಂಕವಲ್ಲ ಎಂಬುದನ್ನ ಎಂದಿಗೂ ಮರೆಯಬೇಡಿ! ನಾವೆಲ್ಲ ಆಡಳಿತ ಮತ್ತು ವೈದ್ಯರು ನೀಡುವ ಸಲಹೆಗಳನ್ನ ಪಾಲಿಸೋಣ. ಅನಗತ್ಯ ಪ್ರಯಾಣವನ್ನ ಮುಂದೂಡಿ, ನಮ್ಮ ಪ್ರತಿಯೊಂದು ಸಣ್ಣ ಪ್ರಯತ್ನವೂ ದೊಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಿರಿ.. ಮನೆಯಿಂದ ಹೊರ ಬರಬೇಡಿ, ಈ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನ ಸುರಕ್ಷಿತವಾಗಿಡಿ ಎಂದು ಮೋದಿ ಟ್ವೀಟ್‌ನಲ್ಲಿ ಕರೆ ನೀಡಿದ್ದಾರೆ.

ಕೊರೊನಾವೈರಸ್ ಏಕಾಏಕಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭವಿಷ್ಯದ ಸವಾಲುಗಳಿಗೆ ತಯಾರಿ ನಡೆಸಲು ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಪ್ರಧಾನಿ 'ಜನತಾ ಕರ್ಫ್ಯೂ' ಗೆ ಕರೆ ನೀಡಿದ್ದಾರೆ.

ಕಷ್ಟದ ಸಮಯದಲ್ಲಿ ವೈದ್ಯಕೀಯ ಮತ್ತು ಸೇವಾ - ಆಧಾರಿತ ವೃತ್ತಿಗಳಲ್ಲಿ ದಣಿವರಿಯದೇ ಕೆಲಸ ಮಾಡುತ್ತಿದ್ದವರಿಗೆ ಕೃತಜ್ಞತೆ ವ್ಯಕ್ತಪಡಿಸುವಂತೆ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ. ಇನ್ನು ಈ ವರೆಗೆ ನಮ್ಮ ದೇಶದಲ್ಲಿ 327 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 5 ಜನರು ಮಾಹಾಮಾರಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details