ಮುಂಬೈ:ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಲಕ್ಷ್ಮಿ ಬಾಂಬ್ ಸಿನಿಮಾ ದೈತ್ಯ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಬಿಡುಗಡೆಯಾಗಲಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಈ ಕುರಿತು ನೆಟಿಜನ್ಸ್ ಚರ್ಚೆ ನಡೆಸುತ್ತಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ಚಿತ್ರ ತಂಡದ ಈ ನಿರ್ಧಾರಕ್ಕೆ ನೆಟಿಜನ್‌ಗಳ ಒಂದು ಭಾಗವು ಬೆಂಬಲವನ್ನು ಸೂಚಿಸಿದರೆ, ಇತರರು ಈ ನಿರ್ಧಾರದಿಂದ ನಿರಾಶೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು " ಪ್ರೇಕ್ಷಕರು ಸಾಮೂಹಿಕವಾಗಿ ಸೇರಿ ಸಿನಿಮಾ ನೋಡುವಂತಿಲ್ಲ. ಹೀಗಾಗಿ ಅಕ್ಷಯ್ ಅವರ ನಿರ್ಧಾರ ಅವರ ಕಡೆಯಿಂದ ನೋಡಿದರೆ ಸರಿಯೇ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ. ಆದರೆ, ಇನ್ನೊಬ್ಬ ಬಳಕೆದಾರ ಟ್ವೀಟ್ ಮಾಡಿ "ಚಿತ್ರಮಂದಿರಗಳನ್ನು ಬೆಂಬಲಿಸಲು ಲಕ್ಷ್ಮಿಬಾಂಬ್ ಅನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡದಂತೆ ಅಕ್ಷಯ್ ಕುಮಾರ್ ಅವರಿಗೆ ನನ್ನ ವಿನಂತಿ" ಎಂದು ಬರೆದುಕೊಂಡಿದ್ದಾರೆ.
ಇನ್ನೂ ಲಾಕ್‌ಡೌನ್ ಹಿನ್ನೆಲೆ ತಂಡವು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಕೆಲಸವು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ಜೂನ್ ವೇಳೆಗೆ ಚಿತ್ರ ಸಿದ್ಧವಾಗಲಿದೆ ಎಂದು ತಯಾರಕರು ಹೇಳುತ್ತಿದ್ದಾರೆ.