ನವದೆಹಲಿ:ಜಗತ್ತಿನ ಆಗುಹೋಗುಗಳಿಗೆ ಎಲ್ಲಕ್ಕಿಂತ ವೇಗವಾಗಿ ಸ್ಪಂದಿದುವ ಅಗ್ರ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಇಂದು #cancelallBlueTicksinIndia ಎನ್ನುವ ಹ್ಯಾಶ್ಟ್ಯಾಗ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಕೇವಲ ಎರಡು ಟ್ವೀಟ್ ಮಾಡಿರುವ ಅಮಿತ್ ಶಾ ಪುತ್ರ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಬ್ಲೂ ಟಿಕ್ ನೀಡಿರುವುದು ಟ್ವಿಟರ್ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಯ್ ಶಾಗೆ 10 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ಅಮಿತ್ ಶಾ ಪುತ್ರ ಎನ್ನುವ ಫ್ಯಾಕ್ಟರ್ ಇಲ್ಲಿ ಕೆಲಸ ಮಾಡಿದೆ ಎನ್ನುವುದು ನೆಟ್ಟಿಗರ ಆಕ್ರೋಶ.
ಜಯ್ ಶಾಗೆ ಬ್ಲೂ ಟಿಕ್ ನೀಡಿದ್ದು ಒಂದೆಡೆಯಾದರೆ, ಕೆಲ ಖ್ಯಾತನಾಮರಿಗೆ ಈ ಅಧಿಕೃತ ಮಾನ್ಯತೆ ನೀಡದಿರುವುದೂ ಇಲ್ಲಿ ಪ್ರಸ್ತಾಪವಾಗಿದೆ. ಬುಡಕಟ್ಟು ಸಮುದಾಯದ ದೊಡ್ಡ ಧ್ವನಿ ಹನ್ಸರಾಜ್ ಅವರ ಖಾತೆಗೆ ಬ್ಲೂ ಟಿಕ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ದಲಿತರಿಗೆ ಟ್ವಿಟರ್ ಅನ್ಯಾಯ ಎಸಗುತ್ತಿದೆ, ಅಧಿಕಾರಲ್ಲಿರುವ ಮೇಲ್ಜಾತಿಯವರಿಗೆ ಟ್ವಿಟರ್ ಅಧಿಕೃತ ಮಾನ್ಯತೆ ನೀಡುತ್ತಿದೆ ಎಂದು ಆರೋಪಿಸಿ ನೆಟ್ಟಿಗರು ಟ್ವಿಟರ್ ಇಂಡಿಯಾನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.