ನವದೆಹಲಿ:ಐದು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ನೆದರ್ಲ್ಯಾಂಡ್ ರಾಜ ವಿಲ್ಲೆಮ್ ಅಲೆಕ್ಸಾಂಡರ್ ಹಾಗೂ ರಾಣಿ ಮಾಕ್ಷಿಮಾ ಅವರು ರಾಜಘಾಟ್ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ನಮನ ಸಲ್ಲಿಸಿದರು.
ರಾಜಘಾಟ್ಗೆ ನೆದರ್ಲ್ಯಾಂಡ್ ರಾಜ-ರಾಣಿ ಭೇಟಿ: ರಾಷ್ಟ್ರಪಿತನ ಸಮಾಧಿಗೆ ನಮನ - ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ
ಭಾರತ ಪ್ರವಾಸದಲ್ಲಿರುವ ನೆದರ್ಲ್ಯಾಂಡ್ ರಾಜ ವಿಲ್ಲೆಮ್ ಅಲೆಕ್ಸಾಂಡರ್ ಹಾಗೂ ರಾಣಿ ಮಾಕ್ಷಿಮಾ ಅವರು ರಾಜಘಾಟ್ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ನಮನ ಸಲ್ಲಿಸಿದರು.
ರಾಷ್ಟ್ರಪಿತನ ಸಮಾಧಿ
ಇದಕ್ಕೂ ಮುನ್ನ ನೆದರ್ಲ್ಯಾಂಡ್ ರಾಜ ದಂಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 2013ರಲ್ಲಿ ಪಟ್ಟಕ್ಕೇರಿದ ಬಳಿಕ ರಾಜ ವಿಲ್ಲೆಮ್-ಅಲೆಕ್ಸಾಂಡರ್ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.