ತಿರುವನಂತಪುರಂ: ಪ್ರವಾಸಕ್ಕೆಂದು ನೇಪಾಳಕ್ಕೆ ತೆರಳಿ, ಅಲ್ಲಿ ಗ್ಯಾಸ್ ಹೀಟರ್ನಿಂದ ಉಸಿರುಗಟ್ಟಿ ಮೃತಪಟ್ಟಿದ್ದ ಕೇರಳದ ದಂಪತಿ ಹಾಗೂ ಅವರ ಮಕ್ಕಳ ಅಂತ್ಯಕ್ರಿಯೆಯನ್ನು ಇಂದು ನಡೆಸಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ನೇಪಾಳ ಗ್ಯಾಸ್ ಹೀಟರ್ ದುರಂತ: ಕೇರಳದಲ್ಲಿ ಐವರ ಅಂತ್ಯಕ್ರಿಯೆ - ನೇಪಾಳ ದುರಂತ: ಕೇರಳದಲ್ಲಿ ಐವರ ಅಂತ್ಯಕ್ರಿಯೆ
ಪ್ರವಾಸಕ್ಕೆಂದು ನೇಪಾಳಕ್ಕೆ ತೆರಳಿ, ಅಲ್ಲಿ ಗ್ಯಾಸ್ ಹೀಟರ್ನಿಂದ ಉಸಿರುಗಟ್ಟಿ ಮೃತಪಟ್ಟಿದ್ದ ಕೇರಳದ ಎಂಟು ಮಂದಿಯು ಪೈಕಿ ಐವರ ಅಂತ್ಯಕ್ರಿಯೆಯನ್ನು ಇಂದು ನಡೆಸಲಾಗಿದೆ.
ಗುರುವಾರ ಮಧ್ಯಾಹ್ನ ಕಠ್ಮಂಡುವಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಶವಗಳನ್ನು ತರಲಾಗಿದ್ದು, ಇಂದು ಮೃತ ಪ್ರವೀಣ್‌ಕುಮಾರ್ ನಾಯರ್, ಅವರ ಪತ್ನಿ ಹಾಗೂ ಮೂವರು ಮಕ್ಕಳ ಅಂತ್ಯಕ್ರಿಯೆ ಕೇರಳದಲ್ಲಿ ನಡೆದಿದೆ.
ರಜಾದಿನಗಳನ್ನು ಕಳೆಯಲು ನೇಪಾಳಕ್ಕೆ ಕೇರಳದ ಎರಡು ಕುಟುಂಬಗಳು ತೆರಳಿದ್ದವು. ದಮನ್‌ನ ಎವರೆಸ್ಟ್ ಪನೋರಮಾ ರೆಸಾರ್ಟ್ನ ಕೋಣೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಗ್ಯಾಸ್ ಹೀಟರ್ನಿಂದ ಉಸಿರುಗಟ್ಟಿ ಚೆಂಬರತಿ ಕೋಟೆ ಮೂಲದ ಪ್ರವೀಣ್‌ಕುಮಾರ್ ನಾಯರ್(39), ಅವರ ಪತ್ನಿ ಶರಣ್ಯ(34), ಹಾಗೂ ಅವರ ಮಕ್ಕಳಾದ ಶ್ರೀಭದ್ರಾ, ಅರ್ಚಾ, ಅಭಿನಾವ್, ಕೋಯಿಕೋಡ್ನ ಕುನ್ನಮಂಗಲಂ ಮೂಲದ ರಂಜಿತ್‌ಕುಮಾರ್ (39), ಅವರ ಪತ್ನಿ ಇಂದೂ (35), ಅವರ ಮಕ್ಕಳಾದ ವೈಷ್ಣವ್ ರಂಜಿತ್ ಮೃತಪಟ್ಟಿದ್ದರು.