ಕರ್ನಾಟಕ

karnataka

ETV Bharat / bharat

’’ವಿವಾದಿತ ಸ್ಥಳಗಳಲ್ಲಿ ಓಡಾಡಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ‘‘: ಮತ್ತೆ ಕಿರಿಕ್​ ತೆಗೆದ ನೇಪಾಳ - ಲಿಪುಲೇಕ್

ಉತ್ತರಾಖಂಡ ರಾಜ್ಯದ ಕೆಲವೊಂದು ವಿವಾದಿತ ಪ್ರದೇಶಗಳಲ್ಲಿ ಓಡಾಡಲು ತಮ್ಮ ಪ್ರಜೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುವುದಾಗಿ ನೇಪಾಳ ಹೇಳಿ ಕೊಂಡಿದೆ.

indo nepal border
ಭಾರತ, ನೇಪಾಳ ಗಡಿ

By

Published : Aug 3, 2020, 12:07 PM IST

ಪಿತೂರ್​ಗಢ (ಉತ್ತರಾಖಂಡ):ಭಾರತದ ನಡುವಿನ ವಿವಾದಿತ ಪ್ರದೇಶಗಳಲ್ಲಿ ಓಡಾಡಲು ನೇಪಾಳದ ಪ್ರಜೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನೇಪಾಳ ಸರ್ಕಾರದ ಪ್ರಾಧಿಕಾರ ಹೇಳಿಕೊಂಡಿದೆ.

ಕೆಲವು ದಿನಗಳ ಹಿಂದೆ ಉತ್ತರಾಖಂಡದ ಪಿತೂರ್​​ಗಢ ಜಿಲ್ಲೆಯ ಧರ್ಚುಲಾ ಸಬ್​ ಡಿವಿಷನಲ್​ ಮ್ಯಾಜಿಸ್ಟ್ರೇಟ್​ ನೇಪಾಳದ ಪ್ರಾಧಿಕಾರವೊಂದಕ್ಕೆ ಪತ್ರ ಬರೆದು ಆ ದೇಶದ ನಾಗರಿಕರು ಕಾಲಾಪಾನಿ, ಲಿಂಪಿಯಾದುರಾ, ಲಿಪುಲೇಕ್​ ಮುಂತಾದ ವಿವಾದಿತ ಸ್ಥಳಗಳಲ್ಲಿ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ ಎಂದು ದೂರು ನೀಡಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನೇಪಾಳ ಸರ್ಕಾರದ ಪ್ರಾಧಿಕಾರ ಯಾವುದೇ ವಿವಾದಿತ ಪ್ರದೇಶಗಳಲ್ಲಿ ಓಡಾಡಲು ಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿ ತನ್ನ ಪುಂಡಾಟ ಮೆರೆದಿದೆ.

ಇದೇ ಪ್ರತಿಕ್ರಿಯೆಯಲ್ಲಿ 1816ರ ಸುಗೌಲಿ ಒಪ್ಪಂದದ ಪ್ರಕಾರ ಕಾಲಾಪಾನಿ, ಲಿಂಪಿಯಾದುರಾ, ಲಿಪುಲೇಖ್​ ಪ್ರದೇಶಗಳಲ್ಲಿ ಓಡಾಡಲು ನೇಪಾಳದ ಪ್ರಜೆಗಳಿಗೆ ಅನುಮತಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇತ್ತೀಚೆಗೆ ನೇಪಾಳ ಸಂಸತ್ತು ಹೊಸ ರಾಜಕೀಯ ಭೂಪಟವನ್ನು ಅಂಗೀಕರಿಸಿದ್ದು, ಲಿಂಪಿಯಾಧುರಾ, ಕಾಲಾಪಾನಿ ಹಾಗೂ ಲಿಪುಲೇಖ್​ ಪ್ರದೇಶಗಳು ನೇಪಾಳಕ್ಕೆ ಸೇರಿದ್ದಾವೆ ಎಂದು ಹೇಳಿಕೊಂಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಇದಕ್ಕೂ ಮೊದಲು ಭಾರತ ಕೈಲಾಸ, ಮಾನಸ ಸರೋವರ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಉದ್ಘಾಟಿಸಿದ್ದು, ಈ ಸ್ಥಳ ತಮಗೆ ಸೇರಿದ್ದು ಎಂದು ನೇಪಾಳ ವಾದಿಸಿತ್ತು.

ABOUT THE AUTHOR

...view details