ಕರ್ನಾಟಕ

karnataka

ETV Bharat / bharat

ಚಪಾತಿಯಲ್ಲಿ ಮತ್ತಿನ ಔಷಧ ಇರಿಸಿ 15 ಲಕ್ಷ, ಬಂಗಾರ ದೋಚಿದ ಕಳ್ಳರು: ಮುತ್ತಿನ ನಗರಿಯಲ್ಲಿ ನೇಪಾಳಿ ಗ್ಯಾಂಗ್​!

ಮನೆ ಕಳ್ಳನನ್ನು ದೇವರಿಂದಲೂ ಹಿಡಿಯಲು ಸಾಧ್ಯವಿಲ್ಲ ಎಂಬ ಮಾತಿದೆ. ಈ ಮಾತು ನೇಪಾಳಿ ಕಳ್ಳರ ಗ್ಯಾಂಗ್ ನಿಜ ಮಾಡಿದೆ. ಉಂಡ ಮನೆಗೆ ಕನ್ನ ಹಾಕಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

nepal gang robbery, nepal gang robbery in Hyderabad, nepal gang robbery news, nepal gang robbery latest news, Hyderabad crime news, ನೇಪಾಳ ಗ್ಯಾಂಗ್​ ದರೋಡೆ, ಹೈದರಾಬಾದ್​ನಲ್ಲಿ ನೇಪಾಳ ಗ್ಯಾಂಗ್​ ದರೋಡೆ, ನೇಪಾಳ ಗ್ಯಾಂಗ್​ ದರೋಡೆ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ಚಪಾತಿಯಲ್ಲಿ ಮತ್ತು ಕಲಿಸಿ 15 ಲಕ್ಷ, ಬಂಗಾರ ದೋಚಿದ ಕಳ್ಳರು

By

Published : Oct 6, 2020, 4:06 PM IST

Updated : Oct 6, 2020, 4:27 PM IST

ಹೈದರಾಬಾದ್​:ತೆಲಂಗಾಣದ ಹೈದರಾಬಾದ್​ನಲ್ಲಿ ಭಾರಿ ಕಳ್ಳತನ ನಡೆದಿದೆ. ನೇಪಾಳ ಕಳ್ಳರ ಗ್ಯಾಂಗ್​ವೊಂದು ಮನೆ ಮಾಲೀಕರಿಗೆ ಮತ್ತು ಭರಿಸುವ ಔಷಧ ನೀಡಿ ಮನೆ ದೋಚಿರುವ ಘಟನೆ ಇಲ್ಲಿನ ರಾಯದುರ್ಗ್​ ನಗರದಲ್ಲಿ ನಡೆದಿದೆ.

ಚಪಾತಿಯಲ್ಲಿ ಮತ್ತು ಬರಿಸುವ ಔಷಧ ಕಲಿಸಿ 15 ಲಕ್ಷ, ಬಂಗಾರ ದೋಚಿದ ಕಳ್ಳರು

ಡಿಎನ್‌ಆರ್ ಹಿಲ್ಸ್‌ನಲ್ಲಿ ವಾಸಿಸುತ್ತಿರುವ ಮಧುಸೂದನ್ ರೆಡ್ಡಿ ಮನೆಯಲ್ಲಿ ಕೆಲವು ತಿಂಗಳಿನಿಂದಲೂ ನೇಪಾಳದ ನಿವಾಸಿಗಳು ಮನೆಯ ಕೆಲಸ ಸೇರಿದಂತೆ ಅಡುಗೆ ಸಹ ಮಾಡುತ್ತಿದ್ದರು. ಇವರು ಮಾಲೀಕ ಮಧುಸೂದನ್​ ರೆಡ್ಡಿಯ ನಂಬಿಕೆ ಗಳಿಸಿದ್ದರು. ಕಾಂಟ್ರಾಕ್ಟರ್​​ ಆಗಿದ್ದ ಮಧುಸೂದನ್​ ನಗದು, ಬಂಗಾರ ಎಲ್ಲೆಲ್ಲಿ ಇಟ್ಟಿದ್ದರು ಎಂಬುದನ್ನು ನೇಪಾಳ ಗ್ಯಾಂಗ್​​ನ​ ರಾಜೇಂದರ್​, ಆತನ ಸೊಸೆಯರಾದ ಸೀತಾ, ಜಾನಕಿ ಮತ್ತು ಮನೋಜ್​ ಚೆನ್ನಾಗಿಯೇ ಅರಿತಿದ್ದರು.

ನಿನ್ನೆ ರಾತ್ರಿ ಚಪಾತಿಯಲ್ಲಿ ಮತ್ತು ಬರುವಂತಹ ಔಷಧವನ್ನು ಬೆರೆಸಿ ಮಧುಸೂದನ್​ ಮತ್ತು ಆತನ ಕುಟುಂಕ್ಕೆ ನೀಡಿದ್ದಾರೆ. ಚಪಾತಿ ತಿಂದ ಬಳಿಕ ಎಲ್ಲರೂ ನಿದ್ರೆಗೆ ಜಾರಿದ್ದು, ನೇಪಾಳ​ ಕಳ್ಳರ ಗ್ಯಾಂಗ್​ ತಮ್ಮ ಕೆಲಸವನ್ನು ಸಲೀಸಾಗಿ ಮಾಡಿಕೊಂಡಿದೆ. ಸುಮಾರು 15 ಲಕ್ಷ ನಗದು, 50 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿದೆ.

ಆರೋಪಿಗಳು ಚಪಾತಿಯಲ್ಲಿ ಮತ್ತು ಔಷಧ ಬೆರೆಸಿ ಮಧುಸೂದನ್​ ರೆಡ್ಡಿ ಜತೆ ಆತನ ಹೆಂಡ್ತಿ, ಮಗ, ಸೊಸೆ ಮತ್ತು ಮೊಮ್ಮಗನಿಗೆ ನೀಡಿದ್ದಾರೆ. ಅವರೆಲ್ಲರೂ ನಿದ್ರೆಗೆ ಜಾರಿದ ಬಳಿಕ ಮನೆಯಲ್ಲಿದ್ದ ಬಂಗಾರ, ನಗದು ದೋಚಿದ್ದಾರೆ. ಇನ್ನು ಕಳ್ಳರು ಯಾವುದೇ ಆಧಾರವನ್ನು ಬಿಡದೆ ಸಿಸಿಟಿವಿಯ ಡಿವಿಆರ್, ಮೊಬೈಲ್​ ಫೋನ್​ಗಳನ್ನು ಸಹ ಕದ್ದೊಯ್ದಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

Last Updated : Oct 6, 2020, 4:27 PM IST

ABOUT THE AUTHOR

...view details