ಕಠ್ಮಂಡು: ನೇಪಾಳದ ಧಂಡಿಗ್ ಜಿಲ್ಲೆಯ ನೌಬೈಸ್ ನಲ್ಲಿ ಬೆಳಗ್ಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 5.2 ರಷ್ಟು ತೀವ್ರತೆಯ ಕಂಪನ ಆಗಿದೆ ಎಂದು ಅಲ್ಲಿನ ಭೂ ವಿಜ್ಞಾನ ಸಂಸ್ಥೆ ಹೇಳಿದೆ.
ನೆರೆಯ ರಾಷ್ಟ್ರದಲ್ಲಿ ಭೂಕಂಪ: ಭಯ ಭೀತಿಯಲ್ಲಿ ಜನ - ಭೂ ವಿಜ್ಞಾನ ಸಂಸ್ಥೆ
ನೇಪಾಳದ ಹಲವೆಡೆ ತೀವ್ರತರವಾದ ಕಂಪನವಾಗಿದ್ದು, ಜನ ತೀವ್ರವಾಗಿ ಭೀತಿಗೊಳಗಾಗಿದ್ದಾರೆ. ಈ ಮಧ್ಯೆ ಅಲ್ಲಿನ ಸರ್ಕಾರ ದೇಶದಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಭೂಕಂಪ
ನೇಪಾಳ ರಾಜಧಾನಿ ಕಠ್ಮಂಡುವಿನಲ್ಲೂ ಸುಮಾರು 4.8 ರಷ್ಟು ತೀವ್ರತೆಯ ಭೂಕಂಪನ ಆಗಿದೆ. ಇದರಿಂದಾಗಿ ದೇಶಾದ್ಯಂತ ಅಲ್ಲಿನ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
2015ರಲ್ಲಿ ನೇಪಾಳ ಭೀಕರ ಭೂಕಂಪಕ್ಕೆ ತುತ್ತಾಗಿ ಸಾವಿರಾರು ಜನರು ಹಾಗೂ ಇಡೀ ಕಠ್ಮಂಡು ಅಪಾರ ಪ್ರಮಾಣದ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಜನ ಭಯ ಭೀತಗೊಂಡಿದ್ದಾರೆ.