ಮುಂಬೈ(ಮಹಾರಾಷ್ಟ್ರ):ಕರ್ ಗಯಿ ಚುಲ್, ಸಾಖಿ ಸಾಖಿ ಮತ್ತು ಇತರ ಸೂಪರ್ ಹಿಟ್ ಟ್ರ್ಯಾಕ್‌ಗಳಿಗೆ ತನ್ನದೇ ವಿಭಿನ್ನ ಶೈಲಿಯಲ್ಲಿ ಹಾಡಿ ಹೆಸರುವಾಸಿಯಾದ ನೇಹಾ ಕಕ್ಕರ್ ಹೊಸ ಮೈಲಿಗಲ್ಲು ಮುಟ್ಟಿದ್ದಾರೆ. 4.8 ಬಿಲಿಯನ್ ವೀಕ್ಷಣೆಗಳನ್ನು ಪಡೆದ ಕಾರ್ಡಿ ಬಿ ನಂತರ 4.5 ಬಿಲಿಯನ್ ವೀಕ್ಷಣೆಗಳೊಂದಿಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ಮಹಿಳಾ ಯೂಟ್ಯೂಬ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅತಿ ಹೆಚ್ಚು ವೀಕ್ಷಿಸಲ್ಪಟ್ಟ 2ನೇ ಮಹಿಳಾ ಯೂಟ್ಯೂಬ್ ತಾರೆ ಈಕೆ - ನೇಹಾ ಕಕ್ಕರ್ ಇನ್ಸ್ಟಾ ಖಾತೆ
4.8 ಬಿಲಿಯನ್ ವೀಕ್ಷಣೆಗಳನ್ನು ಪಡೆದ ಕಾರ್ಡಿ ಬಿ ನಂತರ 4.5 ಬಿಲಿಯನ್ ವೀಕ್ಷಣೆಗಳೊಂದಿಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ಮಹಿಳಾ ಯೂಟ್ಯೂಬ್ ತಾರೆ ಎಂಬ ಹೆಗ್ಗಳಿಕೆಗೆ ಗಾಯಕಿ ನೇಹಾ ಕಕ್ಕರ್ ಪಾತ್ರರಾಗಿದ್ದಾರೆ.
ಈ ದಾಖಲೆಗಾಗಿ ನೇಹಾ ಕಕ್ಕರ್ ತನ್ನ ಇನ್ಸ್ಟಾ ಖಾತೆಯಲ್ಲಿ, ಇದಕ್ಕಿಂತ ಹೆಚ್ಚು ಧನ್ಯವಾದಗಳನ್ನು ಹೇಗೆ ಅರ್ಪಿಸಲಿ? ಎನ್ನುತ್ತಾ ಅಪಾರ ಅಭಿಮಾನಕ್ಕೆ ಅನಂತ ಧನ್ಯವಾದವನ್ನು ಅರ್ಪಿಸಿದ್ದಾರೆ.
ಮನರಂಜನಾ ಉದ್ಯಮದಲ್ಲಿ ತನ್ನ ಯಶಸ್ಸಿನ ಪ್ರಯಾಣದ ಬಗ್ಗೆ ಮಾತನಾಡುತ್ತಾ ಇತ್ತೀಚೆಗೆ "ನಾನಿನ್ನೂ ಕನಸಿನಲ್ಲಿ ಬದುಕುತ್ತಿದ್ದೇನೆ ಎನಿಸುತ್ತದೆ. ರಿಷಿಕೇಶದ ಸಣ್ಣ ಪಟ್ಟಣದಿಂದ ಬಂದ ಹುಡುಗಿ ಪ್ರಾರಂಭಿಸಿದ ಪ್ರಯಾಣ ದೆಹಲಿಗೆ ನಂತರ ಬಾಂಬೆಗೆ ಹೋಗಿ ಇಂದು ಇಲ್ಲಿಗೆ ತಲುಪಿಸಿದೆ. ಇಂಥದ್ದೊಂದು ದಿನ ಬರುವುದೆಂದು ಎಂದಿಗೂ ಯೋಚಿಸಲಿಲ್ಲ. ಈಗಲೂ ಜೀವನದಲ್ಲಿ ಇನ್ನಷ್ಟು ದೊಡ್ಡದಾಗಿ ಬೆಳೆಯುವ ಪ್ರಯತ್ನದಲ್ಲಿದ್ದೇನೆ ಎಂದರು.