ಕರ್ನಾಟಕ

karnataka

ETV Bharat / bharat

ನೀಟ್​: ಅಭ್ಯರ್ಥಿಗಳು ರಾಷ್ಟ್ರೀಯತೆಯ ಕೋಟಾ ಬದಲಾಯಿಸಿಕೊಳ್ಳಲು ಅವಕಾಶ

ಮೆಡಿಕಲ್ ಕೌನ್ಸೆಲಿಂಗ್​ ಕಮಿಟಿ ಅಕ್ಟೋಬರ್ 20ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳು ತಮ್ಮ ರಾಷ್ಟ್ರೀಯತೆ ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ.

By

Published : Oct 22, 2020, 5:45 PM IST

ನೀಟ್
neet

ನವದೆಹಲಿ:ನೀಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮೆಡಿಕಲ್ ಕೌನ್ಸೆಲಿಂಗ್​​ ಕಮಿಟಿ ಅಕ್ಟೋಬರ್ 20ರಂದು ಅಧಿಸೂಚನೆ ಹೊರಡಿಸಿದ್ದು, ''ಭಾರತೀಯ'' ಅಥವಾ ''ಇತರ'' ಕೆಟಗರಿಯಲ್ಲಿ ಪರೀಕ್ಷೆ ಬರೆದಿರುವ ಅನಿವಾಸಿ ಭಾರತೀಯ ಅಭ್ಯರ್ಥಿಗಳು ತಮ್ಮ ಕೆಟಗರಿ ಬದಲಾಯಿಸಿಕೊಳ್ಳುವ ಮತ್ತು ಎನ್​ಆರ್​ಐ ಕೋಟಾದಡಿ ಕೌನ್ಸೆಲಿಂಗ್​​​​ಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಿದೆ.

ಪದವಿ ಸೀಟುಗಳಿಗಾಗಿ ಕೌನ್ಸೆಲಿಂಗ್ ನಡೆಯಲಿದ್ದು, ಇಲ್ಲಿ ಅಖಿಲ ಭಾರತ ಕೋಟಾ ಸ್ಥಾನಗಳನ್ನು ಶೇ 15ಕ್ಕೆ ನಿಗದಿಪಡಿಸಲಾಗಿದೆ. ಇದರಿಂದಾಗಿ ಅವಶ್ಯಕತೆ ಇದ್ದವರು ''ಭಾರತೀಯ'' ಕೆಟಗರಿಯಿಂದ ಅನಿವಾಸಿ ಭಾರತೀಯ ಕೋಟಾಗೆ ತಮ್ಮ ಕೆಟಗರಿ ಬದಲಾಯಿಸಿಕೊಳ್ಳಲು ಅವಕಾಶವಿದೆ.

ಮೆಡಿಕಲ್ ಕೌನ್ಸೆಲಿಂಗ್​ ಕಮಿಟಿ ಅಧಿಸೂಚನೆ

ಕೆಟಗರಿ ಬದಲಾವಣೆ ಮಾಡಿಕೊಳ್ಳುವ ಅಭ್ಯರ್ಥಿಗಳು nri.adgmemcc1@gmail.com ಇ-ಮೇಲ್​ಗೆ ತಮ್ಮ ದಾಖಲೆಗಳನ್ನು ಅಕ್ಟೋಬರ್ 23ರೊಳಗೆ ಕಳುಹಿಸಬೇಕೆಂದು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು (https://mcc.nic.in) ಅಧಿಕೃತ ವೆಬ್​ಸೈಟ್​ಗೆ ತೆರಳಿ ಮಾಹಿತಿ ಪಡೆಯಬಹುದಾಗಿದೆ. ಇದರ ಜೊತೆಗೆ ಅಧಿಸೂಚನೆ ಪಡೆಯಬಹುದಾದ ನೇರ ಲಿಂಕ್ ಇಲ್ಲಿದೆ.

https://mcc.nic.in/UGCounselling/Home/ShowPdfType=E0184ADEDF913B076626646D3F52C3B49C39AD6D&ID=CD0613BA91FBAB0C5AF2827E308E487E267D28A0

ABOUT THE AUTHOR

...view details