ಕರ್ನಾಟಕ

karnataka

ETV Bharat / bharat

ಆಘಾತಕಾರಿ ಮಾಹಿತಿ: ಶೇ 50ರಷ್ಟು ಪೋಷಕರಲ್ಲಿ ಇಲ್ಲ ರೋಗನಿರೋಧಕ ಶಕ್ತಿ - ಪೋಷಕರಲ್ಲಿ ರೋಗ ನಿರೋಧಕ

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊಂದಿರುವ ಪೋಷಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

Nearly 50% parents
Nearly 50% parents

By

Published : May 12, 2020, 7:30 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಅದರ ವಿರುದ್ಧ ಹೋರಾಟ ನಡೆಸಬೇಕಾದರೆ ರೋಗನಿರೋಧಕ ಶಕ್ತಿ ಹೆಚ್ಚಿಗೆ ಇರುವುದು ಅತಿ ಅವಶ್ಯ. ಆದರೆ, ಇದೀಗ ಬಹಿರಂಗವಾಗಿರುವ ವರದಿ ಪ್ರಕಾರ ಶೇ.50 ರಷ್ಟು ಪೋಷಕರಲ್ಲಿ ರೋಗ ನಿರೋಧಕ ಶಕ್ತಿ ಇಲ್ಲ ಎಂಬುದು ತಿಳಿದು ಬಂದಿದೆ.

ಮಕ್ಕಳ ಹಕ್ಕು ಎನ್​ಜಿಒ ನಡೆಸಿರುವ ಸಂಶೋಧನೆ ಪ್ರಕಾರ ಈ ಮಾಹಿತಿ ಹೊರಬಿದ್ದಿದ್ದು, 22 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಅದು ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ದೇಶದ ಶೇ.50ರಷ್ಟು ಪೋಷಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದು ತಿಳಿಸಿದೆ.

ಆಲ್​ಲೈನ್​ ಮೂಲಕ ಈ ಸಂಶೋಧನೆ ನಡೆಸಲಾಗಿದ್ದು, ದೇಶದಲ್ಲಿ ಮೊದಲನೇ ಹಂತ ಹಾಗೂ ಎರಡನೇ ಹಂತದ ಲಾಕ್​ಡೌನ್​ ಜಾರಿಯಲ್ಲಿದ್ದ ವೇಳೆ ಈ ಸಮೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಸುಮಾರು 1,100 ಪೋಷಕರು ಈ ಸಮೀಕ್ಷೆಗೊಳಪಟ್ಟಿದ್ದಾಗಿ ತಿಳಿಸಿದೆ. ಸಮೀಕ್ಷೆ ಪ್ರಕಾರ ಶೇ.63ರಷ್ಟು ಕುಟುಂಬದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದು ತಿಳಿದಿದೆ.

ಪ್ರತಿ ನಾಲ್ಕು ಜನರಲ್ಲಿ ಲಾಕ್​ಡೌನ್​ ಸಮಯದಲ್ಲಿ ನಿಯಮಿತವಾಗಿ ಆರೋಗ್ಯ ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಯಮಿತ ಆರೋಗ್ಯ ಸೌಲಭ್ಯದ ಕೊರತೆಯಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದು ತಿಳಿಸಿದೆ.

ABOUT THE AUTHOR

...view details