ಕರ್ನಾಟಕ

karnataka

ETV Bharat / bharat

A130 ಪ್ರತ್ಯೇಕವಾದಿಗಳ ಬಂಧನ: ರಾತ್ರೋರಾತ್ರಿ ಕಾಶ್ಮೀರಕ್ಕೆ ಬಂದ್ರು 10 ಸಾವಿರ ಸೈನಿಕರು - ಏರ್​ ಲಿಫ್ಟ್

ಶ್ರೀನಗರದಲ್ಲಿ 130 ಪ್ರತ್ಯೇಕವಾದಿಗಳನ್ನು ಪೊಲೀಸರು ಬಂಧಿಸಿದ್ದು, 10 ಸಾವಿರ ಸೈನಿಕರನ್ನು ಕೇಂದ್ರ ಸರ್ಕಾರ ರವಾನಿಸಿ ಬಿಗಿ ಬಂದೋಬಸ್ತ್​ ಮಾಡಿದೆ

ಶ್ರೀನಗರದಲ್ಲಿ 10 ಸಾವಿರ ಸೈನಿಕರ ಜಮಾವಣೆ

By

Published : Feb 23, 2019, 9:46 PM IST

ಶ್ರೀನಗರ: ಪುಲ್ವಾಮ ದಾಳಿ ಬಳಿಕ ಕಣಿವೆ ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ. 130 ಪ್ರತ್ಯೇಕವಾದಿಗಳನ್ನು ನಿನ್ನೆ ರಾತ್ರಿ ಪೊಲೀಸರು ದಿಢೀರ್​ ಆಗಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೆ ಕೇಂದ್ರ ಸರ್ಕಾರವು 10 ಸಾವಿರ ಸೈನಿಕರನ್ನು ಕಾಶ್ಮೀರಕ್ಕೆ ಏರ್​ ಲಿಫ್ಟ್​ ಮಾಡಿದೆ.

ಜತೆಗೆ ಜಮಾತ್​ ಇ ಇಸ್ಲಾಮಿಯ ಮುಖ್ಯಸ್ಥ ಅಬ್ದುಲ್​ ಹಮೀದ್​ ಫಯಾಜ್ ಹಾಗೂ ಹುರಿಯತ್​ ಕಾನ್ಫರೆನ್ಸ್​ನ ಯಾಸಿನ್​ ಮಲೀಕ್​ ಸೇರಿ 130 ಪ್ರತ್ಯೇಕವಾದಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಜಮಾತ್​ ಇ ಇಸ್ಲಾಮಿಯು ಉಗ್ರ ಸಂಘಟನೆ ಹಿಜ್ಬುಲ್​ ಮುಜಾಹಿದ್ದೀನ್​ನ ರಾಜಕೀಯ ಪಡೆಯಾಗಿದೆ. ಪೊಲೀಸರು ತಿಳಿಸುವಂತೆ, ರಾಜ್ಯದ ಸುರಕ್ಷತೆಗಾಗಿ ಪ್ರತ್ಯೇಕವಾದಿಗಳನ್ನು ಹಾಗೂ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.

ನಿನ್ನೆ ಸಂಜೆ ಕೇಂದ್ರ ಗೃಹ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿ, 100 ಹೆಚ್ಚುವರಿ ಪ್ಯಾರಾ ಮಿಲಿಟರಿ​ ಯೋಧರ ಕಂಪನಿಗಳನ್ನು ಶ್ರೀನಗರಕ್ಕೆ ಕಳುಹಿಸುವಂತೆ ಹೇಳಿದೆ. ಒಂದು ಕಂಪನಿಯಲ್ಲಿ 80 - 150 ಸೈನಿಕರು ಇರುತ್ತಾರೆ. 45 ಸಿಆರ್​ಪಿಎಫ್​ ಕಂಪನಿಗಳು, 35 ಬಿಎಸ್​ಎಫ್​ ಕಂಪನಿ ಹಾಗೂ 10 ಸಶಸ್ತ್ರ ಸೀಮಾ ಬಲದ ಸೈನಿಕ ದಳ ಸೇರಿ ಭಾರಿ ಸಂಖ್ಯೆಯಲ್ಲಿಯೇ ಸೈನಿಕರನ್ನು ಕಾಶ್ಮೀರದಲ್ಲಿ ಜಮಾವಣೆ ಮಾಡಲಾಗಿದೆ.

ಪುಲ್ವಾಮ ದಾಳಿ ನಂತರ ಭಾರತೀಯ ಸೇನೆ, ಅಡಗಿ ಕುಳಿತಿದ್ದ ಜೈಶೆ​ ಉಗ್ರರನ್ನು ಹುಡುಕಿ ಬೇಟೆಯಾಡಿದೆ. ಇದರಿಂದ ಕಣಿವೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರಿ ಭದ್ರತೆಯನ್ನು ಒದಗಿಸಲಾಗಿದೆ ಎನ್ನಲಾಗ್ತಿದೆ.

ABOUT THE AUTHOR

...view details