ಕರ್ನಾಟಕ

karnataka

ETV Bharat / bharat

ವಿಶಾಖಪಟ್ಟಣಕ್ಕೆ ವಿಶೇಷ ಸಿಬಿಆರ್​ಎನ್​ ಎನ್​ಡಿಆರ್​ಎಫ್​ ತಂಡ ರವಾನೆ

ಅನಿಲ ಸೋರಿಕೆಯಾಗಿರುವ ಕಾರ್ಖಾನೆ ಹತ್ತಿರದ 1000 ಜನರ ಮೇಲೆ ಅತಿಹೆಚ್ಚು ಪರಿಣಾಮವಾಗಿದೆ ಎಂದು ಎನ್​ಡಿಎಂಎ ಸದಸ್ಯ ಕಮಲ್​ ಕಿಶೋರ ತಿಳಿಸಿದ್ದಾರೆ. ಕಾರ್ಖಾನೆಯ ಸುತ್ತಲಿನ 3 ಕಿಮೀವರೆಗಿನ ಪ್ರದೇಶಗಳ 250 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ.

NDRF deploys team
NDRF deploys team

By

Published : May 7, 2020, 7:53 PM IST

ನವದೆಹಲಿ:ವಿಷಾನಿಲ ಸೋರಿಕೆಯಿಂದ 11 ಜನ ಸಾವಿಗೀಡಾಗಿ ಸಾವಿರಾರು ಜನ ಅಸ್ವಸ್ಥಗೊಂಡಿರುವ ವಿಶಾಖಪಟ್ಟಣಕ್ಕೆ ಪರಿಣತಿ ಸಿಬಿಆರ್​ಎನ್​ (CBRN-chemical, biological, radiological and nuclear) ಎನ್​ಡಿಆರ್​ಎಫ್​ ತಂಡವನ್ನು ಕಳುಹಿಸಿಕೊಡಲಾಗಿದೆ.

ಪ್ರಸ್ತುತ ಕಾರ್ಖಾನೆಯಿಂದ ಹೊರಬರುತ್ತಿರುವ ವಿಷಾನಿಲದ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು, ಅನಿಲ ಸೋರಿಕೆಯನ್ನು ಸಂಪೂರ್ಣ ನಿಲ್ಲಿಸುವವರೆಗೂ ಎನ್​ಡಿಆರ್​ಎಫ್​ ತಂಡ ಸ್ಥಳದಿಂದ ಕದಲಲಾರದು ಎಂದು ಎನ್​ಡಿಆರ್​ಎಫ್​ನ ಡೈರೆಕ್ಟರ್ ಜನರಲ್ ಎಸ್​.ಎನ್​. ಪ್ರಧಾನ್ ಹೇಳಿದ್ದಾರೆ.

ಅನಿಲ ಸೋರಿಕೆಯಾಗಿರುವ ಕಾರ್ಖಾನೆಯ ಹತ್ತಿರದ 1000 ಜನರ ಮೇಲೆ ಅತಿಹೆಚ್ಚು ಪರಿಣಾಮವಾಗಿದೆ ಎಂದು ಎನ್​ಡಿಎಂಎ ಸದಸ್ಯ ಕಮಲ್​ ಕಿಶೋರ್​ ತಿಳಿಸಿದ್ದಾರೆ.

ಕಾರ್ಖಾನೆ ಸುತ್ತಲಿನ 3 ಕಿ.ಮೀವರೆಗಿನ ಪ್ರದೇಶಗಳ 250 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಇಲ್ಲಿನ ಪ್ರತಿಮನೆಗಳಿಗೂ ಎನ್​ಡಿಆರ್​ಎಫ್​ ಸದಸ್ಯರು ಭೇಟಿ ನೀಡಿ ಅಸ್ವಸ್ಥಗೊಂಡ ಜನರನ್ನು ಪತ್ತೆ ಮಾಡುತ್ತಿದ್ದಾರೆ.

ಅನಿಲದಿಂದ ಅಸ್ವಸ್ಥಗೊಂಡಿರುವ ಜನರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡಗಳಿಗೆ ನೆರವಾಗಲು ವಿಶೇಷ ತಾಂತ್ರಿಕ ಸಹಾಯ ತಂಡವನ್ನು ಇಷ್ಟರಲ್ಲೇ ವಿಶಾಖಪಟ್ಟಣಕ್ಕೆ ಕರೆಸಲಿದ್ದೇವೆ ಎಂದು ಎಸ್​.ಎನ್​. ಪ್ರಧಾನ್ ತಿಳಿಸಿದರು.

ABOUT THE AUTHOR

...view details