ಕರ್ನಾಟಕ

karnataka

ETV Bharat / bharat

ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಸರ್ಕಾರ ರಚನೆ ಶತಸಿದ್ಧ; ಕೇಂದ್ರ ಸಚಿವ ಗಿರಿರಾಜ್ ಸಿಂಗ್ - ನಿತೀಶ್​ ಕುಮಾರ್​ ನೇತೃತ್ವದ ಎನ್​ಡಿಎ ಮೈತ್ರಿಕೂಟ

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಹಾರಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸಹ ನಡೆದಿವೆ. ಬಿಹಾರದ ಜನರಿಗೆ ಎನ್‌ಡಿಎ ಅತ್ಯುತ್ತಮ ಆಯ್ಕೆಯಾಗಿದ್ದು ರಾಜ್ಯದಲ್ಲಿ ಮತ್ತೆ ಎನ್​ಡಿಎ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಕಿಶೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

NDA will definitely form government in Bihar: Giriraj Singh
ಕೇಂದ್ರ ಸಚಿವ ಗಿರಿರಾಜ್ ಸಿಂಗ್

By

Published : Nov 7, 2020, 8:22 PM IST

ನವದೆಹಲಿ:ಜಿದ್ದಾಜಿದ್ದಿ ಕಣವಾದ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯ ಎಲ್ಲ ಹಂತದ ಮತದಾನ ಮುಗಿದಿದ್ದು ರಾಜ್ಯ ಸೇರಿದಂತೆ ರಾಷ್ಟ್ರ ನಾಯಕರು ಮತ ಎಣಿಕೆಯ ದಿನಕ್ಕಾಗಿ ಕಾದು ಕುಳಿತಿದ್ದಾರೆ. ಹಲವು ಸವಾಲುಗಳ ನಡುವೆ 15 ವರ್ಷಗಳ ಕಾಲ ಆಡಳಿತ ನಡೆಸಿದ ನಿತೀಶ್​ ಕುಮಾರ್​ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಬಗ್ಗೆ ಹಲವು ನಾಯಕರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಹೊರತಾಗಿಲ್ಲ.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಗಮನಿಸಿದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತೊಮ್ಮೆ ಸರ್ಕಾರ ರಚಿಸುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಬಿಹಾರ ಎಕ್ಸಿಟ್​​ ಪೋಲ್​ ಫಲಿತಾಂಶ ಬಹಿರಂಗ: ಸಮೀಕ್ಷೆಗಳ ಪ್ರಕಾರ ಈ ಮೈತ್ರಿಗೆ ಗೆಲುವು!?

ಹಲವು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವ ಮೂಲಕ ಬಿಹಾರದಲ್ಲಿ ಹೊಸ ಆಯಾಮ ಬರೆಯಲಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡುವುದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಬಿಹಾರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪ್ರಧಾನಿ ಮೋದಿ ಅವರ ಕೈಯಲ್ಲಿ ಬಿಹಾರ ರಾಜ್ಯದ ಅಭಿವೃದ್ಧಿ ಕಾರ್ಯಗಳು ಭದ್ರವಾಗಿರುವುದರಿಂದ ನಿತೀಶ್ ಕುಮಾರ್​​ ಅವರ ಕೈಯನ್ನು ಬಲಪಡಿಸಲೇಬೇಕು ಎಂದಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡುತ್ತಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಡವರ ಪರವಾಗಿದ್ದು ಪ್ರತಿ ಮನೆಮನೆಗೆ ಅನಿಲ ಒದಗಿಸಿದ್ದಾರೆ. ವಿದ್ಯುತ್ ಸೇರಿದಂತೆ ಅನೇಕ ಬಡವರಿಗೆ ಈಗ ಬಿಹಾರದಲ್ಲಿ ಪಿಂಚಣಿ ಸಿಗುತ್ತಿದೆ ಎಂದು ಗಿರಿರಾಜ್ ಸಿಂಗ್ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು. ಇದೇ ವೇಳೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಅವರನ್ನು ಜರಿದ ಸಿಂಗ್, ಮೋದಿ ಅವರು ಗುಜರಾತ್ ಗಲಭೆಯ ನಾಯಕ ಎಂದು ಅಬ್ದುಲ್ ಬರಿ ಸಿದ್ದಿಕಿ ಅವರ ಮೂಲಕ ಹೇಳಿಸಿಕೊಂಡು ಅಪಪ್ರಚಾರ ಮಾಡಿಸಿದ್ದಾರೆ. ಇದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದರು.

ಇದನ್ನೂ ಓದಿ :ಬಿಹಾರ ಚುನಾವಣೆ ಮತದಾನ ಮುಕ್ತಾಯ: ಕೊನೆ ಹಂತದಲ್ಲಿ ಶೇ. 55.22ರಷ್ಟು ವೋಟಿಂಗ್​​

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಹಾರಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸಹ ನಡೆದಿವೆ. ಬಿಹಾರದ ಜನರಿಗೆ ಎನ್‌ಡಿಎ ಅತ್ಯುತ್ತಮ ಆಯ್ಕೆಯಾಗಿದ್ದು ರಾಜ್ಯದಲ್ಲಿ ಮತ್ತೆ ಎನ್​ಡಿಎ ಮೈತ್ರಿಕೂಡ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದರು.

ABOUT THE AUTHOR

...view details