ನವದೆಹಲಿ:ದೇಶದಲ್ಲಿ ಗುರುವಾರದಿಂಂದ ಒಂದು ತಿಂಗಳ ಕಾಲ ಚುನಾವಣಾ ಪರ್ವ ನಡೆಯಲಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಈಗ ಕೇಳಿಬರ್ತಿರುವ ಮಾತೊಂದೇ..? ಅದು ಕೇಂದ್ರದ ಆಡಳಿತದ ಚುಕ್ಕಾಣಿ ಈ ಬಾರಿ ಯಾರ ಕೈಗೆ ಸಿಗಲಿದೆ ಅಂತ. ಈ ಬಗ್ಗೆ ಪೋಲ್ ಆಫ್ ಪೋಲ್ಸ್ ನಡೆಸಿದ ಸರ್ವೆ ಪ್ರಕಾರ, ಎರಡನೇ ಬಾರಿಗೆ ಅಧಿಕಾರದ ಬಿಜೆಪಿ ನೇತೃತ್ವದ ಎನ್‌ಡಿಎ ಪಾಲಾಗಲಿದೆ. ಆದರೆ, ಎನ್ ಡಿಎ ಸಿಂಪಲ್ ಮೆಜಾರಿಟಿ ಪಡೆಯುವುದಕ್ಕೆ ಮಾತ್ರ ಶಕ್ತವಾಗುತ್ತದೆ. 2014 ರ ಮಹಾಚುನಾವಣೆಯಲ್ಲಿ ಬಿಜೆಪಿ ತನ್ನ ಸ್ವಂತ ಬಲದಿಂದ 282 ಸ್ಥಾನಗಳನ್ನು ಗಳಿಸಿದರೆ, ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳನ್ನು ಗಳಿಸಿತ್ತು.
ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ನಂತರ ನಡೆದ ಪ್ರತಿದಾಳಿ (ಸರ್ಜಿಕಲ್ ಸ್ಟ್ರೈಕ್ 2) ನರೇಂದ್ರ ಮೋದಿಯವರಿಗೆ ಹೆಚ್ಚು
ಮಹತ್ವ ತಂದು ಕೊಟ್ಟಿವೆ ಅಂತ ಸಮೀಕ್ಷೆಗಳು ಹೇಳುತ್ತಿವೆ. ದೇಶದಲ್ಲಿ ಬೆಲೆ ಏರಿಕೆ ಹಾಗು ನಿರುದ್ಯೋಗಕ್ಕಿಂತ ರಾಷ್ಟ್ರೀಯ ಭದ್ರತೆಯ ಬಗ್ಗೆ ಜನರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎನ್ನುವುದು ಸರ್ವೇಗಳ ಅಭಿಪ್ರಾಯವಾಗಿದೆ.
ಚುನಾವಣಾ ಸಮೀಕ್ಷೆಗಳು ನಡೆಸಿದ ಸರ್ವೆಗಳು ಏನು ಹೇಳುತ್ತಿವೆ?
ಸಮೀಕ್ಷೆ ನಡೆಸಿದ ಏಜೆನ್ಸಿಎನ್ ಡಿಎಯುಪಿಎಇತರೆ ಪಕ್ಷಗಳು
ಸಿ-ವೋಟರ್ 267ಸ್ಥಾನ 142ಸ್ಥಾನ 134 ಸ್ಥಾನ
ಇಂಡಿಯಾ ಟಿವಿ-ಸಿಎನ್‌ಎಕ್ಸ್ 275ಸ್ಥಾನ 147ಸ್ಥಾನ 121ಸ್ಥಾನ
ಸಿಎಸ್‌ಡಿಎಸ್-ಲೋಕನೀತಿ 263-283(273) 115-135(125) 130-160(145)
ಟೈಮ್ಸ್ ನೌ-ವಿಎಮ್ ಆರ್ 279ಸ್ಥಾನ 149ಸ್ಥಾನ 115ಸ್ಥಾನ
ಪೋಲ್ ಆಫ್ ಪೋಲ್ಸ್ 273ಸ್ಥಾನ 141ಸ್ಥಾನ 129ಸ್ಥಾನ
ಸಮೀಕ್ಷೆಗಳ ಜೊತೆಜೊತೆಗೆ ಮತಬೇಟೆಯ ವೇಳೆ ಬಿಜೆಪಿ- ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪ ತಾರಕ್ಕೇರಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿ, ಕೃಷಿ ಸಮಸ್ಯೆಗಳು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಬದಲಾಗಿ ಬಿಜೆಪಿ ಪಾಕ್ ವಿರುದ್ಧದ ಪ್ರತೀಕಾರದ ವಾಯುದಾಳಿಯನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ ಅಂತ ಕಾಂಗ್ರೆಸ್ ಆರೋಪಿಸಿದೆ.
ಮತದಾನದ ದಿನ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಬಿಜೆಪಿ ಕಳೆದ ಬಾರಿ(2014)ಗಿಂತ ಹೆಚ್ಚು ಸ್ಥಾನ ಗಳಿಸುವ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್, ಬಡ ಕುಟುಂಬಗಳಿಗೆ ವಾರ್ಷಿಕವಾಗಿ 72 ಸಾವಿರ ರೂಪಾಯಿ ನೀಡುವ ತನ್ನ ಪ್ರಣಾಳಿಕೆಯ ಘೋಷಣೆಯನ್ನು ನೆಚ್ಚಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೇರುವ ಆಶಾವಾದ ವ್ಯಕ್ತಪಡಿಸಿದೆ.