ಕರ್ನಾಟಕ

karnataka

ETV Bharat / bharat

ಎನ್​ಡಿಎ ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿಯೇ ಕಾರಣ: ಕೇಂದ್ರ ಸಚಿವರಿಂದ ಶ್ಲಾಘನೆ - ಪ್ರಧಾನಿ ಮೋದಿ ಬಗ್ಗೆ ಕೇಂದ್ರ ಸಚಿವರ ಹೇಳಿಕೆ

ಬಿಹಾರದ ಜನರ ಬಗ್ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಕಠಿಣ ಪರಿಶ್ರಮ ಮತ್ತು ಮಾರ್ಗದರ್ಶನದ ಫಲವಾಗಿದೆ. ಜನರು ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಮತ್ತು 'ಡಬಲ್ ಯುವರಾಜ್' ಅನ್ನು ತಿರಸ್ಕರಿಸಿದ್ದಾರೆ..

NDA leaders welcome Bihar election outcome
ಎನ್​ಡಿಎ ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿಯೇ ಕಾರಣ

By

Published : Nov 11, 2020, 11:55 AM IST

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವಿಗೆ ನರೇಂದ್ರ ಮೋದಿಯವರೇ ಕಾರಣ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.

"ಎನ್‌ಡಿಎ ಮತ್ತೆ ಬಿಹಾರ ಜನರ ಅಸಾಧಾರಣ ನಂಬಿಕೆಯನ್ನು ಗೆದ್ದಿದೆ. ಅವರು ಪ್ರಧಾನಿ ಮೋದಿಯವರ ನಾಯಕತ್ವವನ್ನು ನಂಬಿದ್ದರು. ಬಿಹಾರದ ಅಭಿವೃದ್ಧಿಯಿಲ್ಲದೆ ಭಾರತದ ಅಭಿವೃದ್ಧಿ ಅಪೂರ್ಣವಾಗಿ ಉಳಿಯುತ್ತದೆ ಎಂಬ ಮೋದಿ ನಾಯಕತ್ವದ ಬದ್ಧತೆ ಮೇಲೆ ಜನರು ನಂಬಿಕೆ ಇರಿಸಿದ್ದಾರೆ" ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

"ನಾನು ವಿಪಕ್ಷದಲ್ಲಿರುವ ನಮ್ಮ ಸ್ನೇಹಿತರಿಗೆ ಒಂದೇ ಒಂದು ವಿನಂತಿ ಮಾಡಬೇಕಾಗಿದೆ. ನಮ್ಮ ವಿಜಯದಲ್ಲಿ ನಾವು ಘನತೆ ಹೊಂದಿದ್ದೇವೆ, ಅವರ ಸೋಲಿನಲ್ಲಿ ಅವರು ಸ್ವಲ್ಪ ಅನುಗ್ರಹವನ್ನು ತೋರಿಸಲಿ. ಅದು ಪ್ರಜಾಪ್ರಭುತ್ವದ ಮೂಲತತ್ವ" ಎಂದು ಹೇಳಿದ್ದಾರೆ.

ಬಿಹಾರದ ಜನರು ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಮತ್ತು "ಡಬಲ್ ಯುವರಾಜ್" ಅನ್ನು ತಿರಸ್ಕರಿಸಿದ್ದಾರೆ ಎಂದು ಚೌಬೆ ಹೇಳಿದ್ದಾರೆ.

"ಬಿಹಾರದ ಜನರ ಬಗ್ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಕಠಿಣ ಪರಿಶ್ರಮ ಮತ್ತು ಮಾರ್ಗದರ್ಶನದ ಫಲವಾಗಿದೆ. ಜನರು ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಮತ್ತು 'ಡಬಲ್ ಯುವರಾಜ್' ಅನ್ನು ತಿರಸ್ಕರಿಸಿದ್ದಾರೆ" ಎಂದಿದ್ದಾರೆ.

ಬಿಹಾರದಲ್ಲಿನ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ರೆ, ಮಹಾಘಟಬಂಧನ್ ಮೈತ್ರಿಕೂಟವು 110 ಸ್ಥಾನಗಳನ್ನು ಗೆದ್ದಿದೆ.

ABOUT THE AUTHOR

...view details