ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, 243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಖಾಡಕ್ಕೆ ಇಳಿಯಲು ವಿವಿಧ ಪಕ್ಷಗಳು ರಣತಂತ್ರ ರೂಪಿಸಿಕೊಳ್ಳುತ್ತಿದ್ದು, ಇದೀಗ ಎನ್ಡಿಎ ಘಟಬಂಧನ್ ಕೂಡ ಮೈತ್ರಿ ಪಕ್ಷಗಳೊಂದಿಗೆ ಸ್ಪರ್ಧೆ ನಡೆಸಲಿದೆ.
ಎನ್ಡಿಎ 'ಘಟಬಂಧನ್': ನಿತೀಶ್ ಕುಮಾರ್ ನೇತೃತ್ವದಲ್ಲೇ ಬಿಹಾರ ಚುನಾವಣೆ ಎಂದ ಬಿಜೆಪಿ! - Bihar Elections news
ಬಿಹಾರ ಚುನಾವಣೆಗೆ ಇನ್ನಿಲ್ಲದ ಕಸರತ್ತು ನಡೆಯುತ್ತಿದ್ದು, ಭಾರತೀಯ ಜನತಾ ಪಾರ್ಟಿ ಇದೀಗ ಸಿಎಂ ನಿತೀಶ್ ಕುಮಾರ್ ಯಾದವ್ ನೇತೃತ್ವದಲ್ಲೇ ಎಲೆಕ್ಷನ್ ಎದುರಿಸಲು ನಿರ್ಧರಿಸಿದೆ.

ಇದೇ ವಿಚಾರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಭೂಪೇಂದ್ರ ಯಾದವ್, ಎನ್ಡಿಎ ಘಟಬಂಧನ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರಥ್ಯದಲ್ಲೇ ಚುನಾವಣೆ ನಡೆಸಲು ನಿರ್ಧರಿಸಿದ್ದು, ಬಿಜೆಪಿ, ಜೆಡಿಯು ಮತ್ತು ಲೋಕ ಜನಶಕ್ತಿ ಪಾರ್ಟಿ ಒಗ್ಗಟ್ಟಿನಿಂದ ಸ್ಪರ್ಧೆ ಮಾಡಲಿವೆ. ಇದರ ಜತೆಗೆ ಜಿತಿನ್ ಮಾಝಿ ಪಕ್ಷ ಕೂಡ ಜೆಡಿಯುಗೆ ಸಪೋರ್ಟ್ ಮಾಡಲಿದೆ ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಇದರಲ್ಲಿ ಗೃಹ ಸಚಿವ ಅಮಿತ್ ಶಾ, ಸಂತೋಷ್ ಜೀ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ವೇಳೆ ಸೀಟು ಹಂಚಿಕೆ ವಿಚಾರವಾಗಿ ಮಹತ್ವದ ಮಾತುಕತೆ ನಡೆಸಲಾಗಿದೆ. ಇನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ಮುಖಂಡ ದೇವೇಂದ್ರ ಫಡ್ನವೀಸ್ ಬಿಹಾರ ಇನ್ ಚಾರ್ಜ್ ಆಗಿ ನೇಮಕಗೊಂಡಿದ್ದಾರೆ.