ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗವು ಟ್ವಿಟ್ಟರ್ ಮೂಲಕ ಅಶ್ಲೀಲತೆಯ ಕುರಿತು ಅರಿವು ಮೂಡಿಸಿದೆ.
ಟ್ವಿಟ್ಟರ್ ಮೂಲಕ ಅಶ್ಲೀಲತೆಯ ಕುರಿತು ಅರಿವು ಮೂಡಿಸಿದ ರಾಷ್ಟ್ರೀಯ ಮಹಿಳಾ ಆಯೋಗ - ರಾಷ್ಟ್ರೀಯ ಮಹಿಳಾ ಆಯೋಗ
ಟ್ವಿಟ್ಟರ್ನಲ್ಲಿ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ಮೂಲಕ ಅರಿವು ಮೂಡಿಸಿತು.
![ಟ್ವಿಟ್ಟರ್ ಮೂಲಕ ಅಶ್ಲೀಲತೆಯ ಕುರಿತು ಅರಿವು ಮೂಡಿಸಿದ ರಾಷ್ಟ್ರೀಯ ಮಹಿಳಾ ಆಯೋಗ twitter](https://etvbharatimages.akamaized.net/etvbharat/prod-images/768-512-6809370-485-6809370-1587010443062.jpg)
twitter
"ರಾಷ್ಟ್ರೀಯ ಮಹಿಳಾ ಆಯೋಗದ ಅಧಿಕೃತ ಟ್ವಿಟ್ಟರ್ ಖಾತೆಗೆ ಹಲವಾರು ಡೈರೆಕ್ಟ್ ಮೆಸೇಜ್ ಬಂದಿದ್ದು, ಟ್ವಿಟ್ಟರ್ನಲ್ಲಿ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವ ಕುರಿತು ಬಳಕೆದಾರರು ಮಾಹಿತಿ ನೀಡಿದ್ದಾರೆ" ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.
ಕೋವಿಡ್-19ನಿಂದಾಗಿ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ, ಮಹಿಳೆಯರ ಮೇಲಿನ ಹಿಂಸೆ ಹಾಗೂ ಕಿರುಕುಳವನ್ನು ಪ್ರೇರೇಪಿಸುವ ಇಂತಹ ವಿಡಿಯೋ ಹರಿದಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ.