ನವದೆಹಲಿ:ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ವ್ಯಕ್ತಿಯೊಬ್ಬ 60 ವರ್ಷದ ವೃದ್ಧೆಯನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋವೊಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕೈ ಸೇರಿದೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ.
ಎನ್‌ಸಿಡಬ್ಲ್ಯು ಕೈ ಸೇರಿದ ವೃದ್ಧೆಯ ಮರ್ಡರ್ ವಿಡಿಯೋ... ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ
ವ್ಯಕ್ತಿಯೊಬ್ಬ 60 ವರ್ಷದ ವೃದ್ಧೆಯನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋ ಗಮನಿಸಿರುವ ಎನ್‌ಸಿಡಬ್ಲ್ಯು ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದೆ.
ಈ ಒಂದು ನಿಮಿಷದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ಅನ್ನು ಮಹಿಳೆಯ ಹಣೆಗೆ ಗುರಿಯಿಟ್ಟು ಬೆದರಿಸುತ್ತಿರುವುದು, ಆಕೆ ತಪ್ಪಿಸಿಕೊಳ್ಳಲು ಭಯದಿಂದ ಮನೆಯೊಳಗೆ ಓಡುವಷ್ಟರಲ್ಲಿ ಆತ ಗುಂಡು ಹಾರಿಸಿ ಕೊಲೆ ಮಾಡಿರುವುದು ಮತ್ತು ಮಹಿಳೆ ನೆಲಕ್ಕುರುಳಿ ನರಳಾಡುವುದು ಸೆರೆಯಾಗಿದೆ.
ಸಂಪೂರ್ಣ ಘಟನೆಯನ್ನು ಘಟನಾ ಸ್ಥಳದ ಪಕ್ಕದಲ್ಲೇ ಇದ್ದ ಕಟ್ಟಡದ ಮೇಲಿಂದ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ. ಆರೋಪಿ ಮೋನು ಎಂಬಾತನನ್ನು ಹಾಗೂ ಕೊಲೆಯ ನಂತರ ಅವನಿಗೆ ಆಶ್ರಯ ನೀಡಿದವನನ್ನು ಬಂಧಿಸಲಾಗಿದೆ. ಜೊತೆಗೆ ಈ ಘಟನೆ ವೇಳೆ ವೃದ್ಧೆಯ ರಕ್ಷಣೆಗೆ ಪ್ರಯತ್ನಿಸದೆ ಕೊಲೆಯ ದೃಶ್ಯವನ್ನು ಸೆರೆಹಿಡಿಯುವುದರಲ್ಲಿ ಬ್ಯುಸಿಯಾಗಿದ್ದ ನೆರೆಯ ವ್ಯಕ್ತಿ ಕೂಡ ಕಾನೂನು ಕ್ರಮ ಎದುರಿಸುವಂತಾಗಿದೆ.