ನವದೆಹಲಿ: ಕೌಟುಂಬಿಕ ಹಿಂಸಾಚಾರ ಸಂಬಂಧಪಟ್ಟ ದೂರು ನೀಡಲು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ವಾಟ್ಸ್‌ಆ್ಯಪ್ ಸಹಾಯವಾಣಿ -7217735372 ಬಿಡುಗಡೆ ಮಾಡಿದೆ. ಲಾಕ್‌ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಏರಿಕೆಯಾಗತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇಂತಹ ಪ್ರಕರಣಗಳ ಕುರಿತು, ನೀಡಲಾಗಿರುವ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ, ದೂರು ನೀಡಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗವು ಟ್ವೀಟ್ ಮೂಲಕ ತಿಳಿಸಿದೆ. ಇದರಿಂದಾಗಿ ತೊಂದರೆಯಲ್ಲಿರುವ ಅಥವಾ ಕೌಟುಂಬಿಕ ಹಿಂಸಾಚಾರ ಅನುಭವಿಸುತ್ತಿರುವ ಮಹಿಳೆಯರಿಗೆ ಸಂಸ್ಥೆಯು ಬೆಂಬಲ ಹಾಗೂ ಸಹಾಯ ನೀಡುತ್ತದೆ.