ಕರ್ನಾಟಕ

karnataka

ETV Bharat / bharat

ರೈತರ ಆತ್ಮಹತ್ಯೆ ವರದಿ ಬಿಡುಗಡೆ... ಪಕ್ಕದ ರಾಜ್ಯಗಳಲ್ಲಿ ಇಳಿಕೆ, ನಮ್ಮ ರಾಜ್ಯದಲ್ಲಿ ಏರಿಕೆ! - ರೈತ ಆತ್ಮಹತ್ಯೆ ವರದಿ ಬಿಡುಗಡೆ ಮಾಡಿದ ಕೇಂದ್ರ

ಮೂರು ವರ್ಷಗಳ ಬಳಿಕ ಕೊನೆಗೂ ಕೇಂದ್ರ 2016ರ ರೈತರ ಆತ್ಮಹತ್ಯೆ ವರದಿ ಬಿಡುಗಡೆ ಮಾಡಿದೆ. ಅತ್ಯಧಿಕವಾಗಿ ಅನ್ನದಾತ ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ರೈತ ಆತ್ಮಹತ್ಯೆ ವರದಿ ಬಿಡುಗಡೆ ಮಾಡಿದ ಕೇಂದ್ರ

By

Published : Nov 10, 2019, 11:51 AM IST

Updated : Nov 10, 2019, 12:41 PM IST

ನವದೆಹಲಿ: ಕೇಂದ್ರ ಸರ್ಕಾರ ಕೊನೆಗೂ 2016ರ ರೈತರ ಆತ್ಮಹತ್ಯೆ ದತ್ತಾಂಶವನ್ನು ಬಿಡುಗಡೆ ಮಾಡಿದೆ. ವರ್ಷದಿಂದ ವರ್ಷಕ್ಕೆ ಅನ್ನದಾತನ ಆತ್ಮಹತ್ಯೆ ಸಂಖ್ಯೆಯಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಛತ್ತೀಸ್​ಘಡ್​​ ಸೇರಿದಂತೆ ಇತರ ರಾಜ್ಯಗಳಲ್ಲಿ ಇಳಿಕೆಯಾಗಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಮಾತ್ರ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.

ಇತ್ತೀಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್​ಸಿಆರ್​ಬಿ) ಬಿಡುಗಡೆ ಮಾಡಿರುವ 2016ರ ರೈತರ ಆತ್ಮಹತ್ಯೆ ದತ್ತಾಂಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನ ಮಹಾರಾಷ್ಟ್ರ ಅಲಂಕರಿಸಿದೆ.

ಎನ್​ಸಿಆರ್​ಬಿ ಬಿಡುಗಡೆ ಮಾಡಿರುವ ರೈತರ ಆತ್ಮಹತ್ಯೆ ವರದಿ ಈ ಕೆಳಗಂತಿವೆ...

2014 2015 2016
ಮಹಾರಾಷ್ಟ್ರ 4004 4291 3661
ಕರ್ನಾಟಕ 768 1569 2079
ಮಧ್ಯಪ್ರದೇಶ 1181 1290 1321
ಆಂಧ್ರಪ್ರದೇಶ 632 916 804
ಛತ್ತೀಸ್​ಗಢ್​ 854 954 682

ಇನ್ನು ದೇಶದಾದ್ಯಂತ ನೋಡೋದಾದ್ರೆ 2014ರಲ್ಲಿ 12,360, 2015ರಲ್ಲಿ 12,602, 2016ರಲ್ಲಿ 11,379 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1995ರಿಂದ 2016ರವರೆಗೆ ಒಟ್ಟು 3,33,407 ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆತಂಕ ಮೂಡಿಸುವ ಸಂಗತಿಯಾಗಿದೆ.

Last Updated : Nov 10, 2019, 12:41 PM IST

ABOUT THE AUTHOR

...view details