ಪುಣೆ (ಮಹಾರಾಷ್ಟ್ರ): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ಭಾರತ್ ಭಾಲ್ಕೆ ಮಹಾರಾಷ್ಟ್ರದ ಪುಣೆಯ ರೂಬಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ಎನ್‌ಸಿಪಿ ಶಾಸಕ ಭಾರತ್ ಭಾಲ್ಕೆ ವಿಧಿವಶ - ಪಂಧಾಪುರ-ಮಂಗಳವೇದ ವಿಧಾನಸಭಾ ಕ್ಷೇತ್ರದ ಶಾಸಕ
ಅನಾರೋಗ್ಯದಿಂದಾಗಿ ಎನ್‌ಸಿಪಿ ಶಾಸಕ ಭಾರತ್ ಭಾಲ್ಕೆ ನಿಧನರಾಗಿದ್ದು, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ವಿಷಾದ ವ್ಯಕ್ತಪಡಿಸಿದ್ದಾರೆ.
ಎನ್‌ಸಿಪಿ ಶಾಸಕ ಭಾರತ್ ಭಾಲ್ಕೆ
ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ಭಾಲ್ಕೆಗೆ ಮತ್ತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ನಿನ್ನೆ ರೂಬಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವೆಂಟಿಲೇಟರ್ನಲ್ಲಿರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಭಾಲ್ಕೆ ಅವರು ಪಂಡರಪುರ - ಮಂಗಳವೇದ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇವರ ನಿಧನಕ್ಕೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.