ಕರ್ನಾಟಕ

karnataka

ETV Bharat / bharat

ರಾಜಕೀಯ ಜಟಾಪಟಿ ನಡುವೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಪವಾರ್​ ಭೇಟಿ - ಎನ್​ಸಿಪಿ ಮುಖಂಡ ಶರದ್​ ಪವಾರ್​

ಮಹಾರಾಷ್ಟ್ರದಲ್ಲಿ ರಾಜಕೀಯ ಜಟಾಪಟಿ ಮುಂದುವರಿದಿದ್ದು, ಇದರ ಮಧ್ಯೆ ಎನ್​ಸಿಪಿ ಮುಖಂಡ ಶರದ್​ ಪವಾರ್​ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಶರದ್​ ಪವಾರ್​​

By

Published : Nov 14, 2019, 2:54 PM IST

ಮುಂಬೈ: ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ವಿಷಯವಾಗಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ರಾಜಕೀಯ ಜಟಾಪಟಿ ನಡೆಯುತ್ತಿದೆ. ಇದರ ಮಧ್ಯೆ ಭೀಕರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಎನ್​ಸಿಪಿ ಮುಖಂಡ ಶರದ್​ ಪವಾರ್​ ಭೇಟಿ ನೀಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಶರದ್​ ಪವಾರ್​​

ನಾಗ್ಪುರ್​ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ರೈತರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಈ ವೇಳೆ ರೈತರು ಬೆಳೆ ಹಾನಿ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಈ ಮಧ್ಯೆ ಬೆಳೆ ಹಾನಿಗೊಳಗಾದ ರೈತರು ಪ್ರತಿಭಟನೆ ನಡೆಸಿ, ಬೆಳೆ ಹಾನಿ ನೀಡುವಂತೆ ಆಗ್ರಹಿಸಿದರು. ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವೇಳೆ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಹೊರಬಿದ್ದು 20 ದಿನಗಳು ಕಳೆದು ಹೋಗಿದ್ರೂ, ಇಲ್ಲಿಯವರೆಗೆ ಯಾವುದೇ ಪಕ್ಷಗಳು ಸರ್ಕಾರ ರಚನೆ ಮಾಡದ ಕಾರಣ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ 50:50 ಸೂತ್ರಕ್ಕೆ ಮುಂದಾದ ಕಾರಣ ಬಿಜೆಪಿ ಅದರೊಂದಿಗೆ ಕೈಜೋಡಿಸಲು ಹಿಂದೇಟು ಹಾಕಿದೆ. ಇದರ ಮಧ್ಯೆ ಶಿವಸೇನೆ ಈಗಾಗಲೇ ಕಾಂಗ್ರೆಸ್​​+ಎನ್​ಸಿಪಿ ಜತೆ ಮಾತುಕತೆ ಮುಂದುವರಿಸಿದೆ.

ABOUT THE AUTHOR

...view details