ಕರ್ನಾಟಕ

karnataka

ETV Bharat / bharat

ರಾಜಸ್ಥಾನ, ಛತ್ತೀಸ್​​ಗಢ, ಮಹಾರಾಷ್ಟ್ರ ಬಳಿಕ ಇದೀಗ ಜಾರ್ಖಂಡ್​​... ಬಿಜೆಪಿ ವಿರುದ್ಧ ಸಿಡಿದೆದ್ದ ಪವಾರ್​! - ಎನ್​​ಸಿಪಿ ಮುಖಂಡ ಶರದ್​ ಪವಾರ್​​

ಜಾರ್ಖಂಡ್​​ನಲ್ಲಿ ರಘುಬರ್​ ದಾಸ್​ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಹೀನಾಯ ಸೋಲು ಕಾಣುತ್ತಿದ್ದಂತೆ ಎನ್​​ಸಿಪಿ ಮುಖಂಡ ಶರದ್​ ಪವಾರ್ ತಮ್ಮ​​ ಆಕ್ರೋಶ ಹೊರಹಾಕಿದ್ದಾರೆ.

NCP Chief Sharad Pawar
ಶರದ್​ ಪವಾರ್​​

By

Published : Dec 23, 2019, 5:37 PM IST

ಮುಂಬೈ: 81 ಕ್ಷೇತ್ರಗಳ ಜಾರ್ಖಂಡ್​ ವಿಧಾನಸಭಾ ಫಲಿತಾಂಶ ಇದೀಗ ಹೊರಬೀಳುತ್ತಿದ್ದ ರಘುಬರ್​​ ದಾಸ್​ ನೇತೃತ್ವದ ಆಡಳಿತ ಪಕ್ಷ ಬಿಜೆಪಿ ಮುಖಭಂಗ ಅನುಭವಿಸಿದ್ದು, ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್​​, ಜೆಎಂಎಂ ಹಾಗೂ ಆರ್​​ಜೆಡಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾ ಬಲ ಪಡೆದುಕೊಂಡು ಜಯದ ನಗೆ ಬೀರಿವೆ.

ಶರದ್​ ಪವಾರ್​​, ಎನ್​​ಸಿಪಿ ನೇತಾರ

ಈ ನಡುವೆ,ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಾರ್ಖಂಡ್​​ ಫಲಿತಾಂಶ ಜನರು ಬಿಜೆಪಿ ಬಿಟ್ಟು ಬೇರೆ ಪಕ್ಷಗಳತ್ತ ಒಲವು ತೋರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ. ಈಗಾಗಲೇ ಬಿಜೆಪಿ ರಾಜಸ್ಥಾನ, ಛತ್ತೀಸ್​​ಗಢ, ಮಹಾರಾಷ್ಟ್ರದಲ್ಲಿ ಸೋಲು ಅನುಭವಿಸಿದ್ದು, ಇದೀಗ ಜಾರ್ಖಂಡ್​​ನಲ್ಲೂ ಅಧಿಕಾರದಿಂದ ದೂರ ಉಳಿಯುವಂತಹ ಅನಿವಾರ್ಯತೆ ಎದುರಾಗಿದೆ.

81 ಕ್ಷೇತ್ರಗಳ ಪೈಕಿ ಹೇಮಂತ್​ ಸೊರೇನ್​ ನೇತೃತ್ವದ ಜಾರ್ಖಂಡ್​ ಮುಕ್ತಿ ಮೋರ್ಚಾ, ಕಾಂಗ್ರೆಸ್​ ಹಾಗೂ ಆರ್​​ಜೆಡಿ ಸೇರಿ 45 ಕ್ಷೇತ್ರಗಳಲ್ಲಿ ಈಗಾಗಲೇ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ 25 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಸೋಲು ಒಪ್ಪಿಕೊಂಡಿದೆ.

ABOUT THE AUTHOR

...view details