ಕರ್ನಾಟಕ

karnataka

ETV Bharat / bharat

6 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ನಟಿ ದೀಪಿಕಾ, ಸಾರಾ​, ಶ್ರದ್ಧಾ ಕಪೂರ್​! - ಬಾಲಿವುಡ್​​ನ ಮಾದಕ ವಸ್ತು ಪ್ರಕರಣ

ಬಾಲಿವುಡ್​​ನ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೊಣೆ ಸೇರಿದಂತೆ ಮೂವರು ನಟಿಮಣಿಯರು ಇಂದು ಮಾದಕ ವಸ್ತು ನಿಯಂತ್ರಣ ದಳ(ಎನ್​​ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

Deepika Padukone
Deepika Padukone

By

Published : Sep 26, 2020, 6:35 PM IST

ಮುಂಬೈ:ಬಾಲಿವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟಿ ದೀಪಿಕಾ ಪಡುಕೊಣೆ, ಶ್ರದ್ಧಾ ಕಪೂರ್​​ ಹಾಗೂ ಸಾರಾ ಅಲಿ ಖಾನ್​​ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದು, ಸತತ ಆರು ಗಂಟೆಗೂ ಅಧಿಕ ಕಾಲ ವಿಚಾರಣೆಗೊಳಪಟ್ಟಿದ್ದಾರೆ.

ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿತ್ತು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಗೆ ಆಗಮಿಸಿದ್ದ ಅವರು ಸರಿಸಮಾರು 6 ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದಾರೆ.

ಜೂನ್​ 14ರಂದು ಬಾಲಿವುಡ್​ ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಬಳಿಕ ನಟಿ ರಿಯಾ ಚಕ್ರವರ್ತಿ ವಿಚಾರಣೆಗೊಳಪಡಿಸಿದಾಗ ಡ್ರಗ್ಸ್​​ ಲಿಂಕ್ ಹೊರಬಿದ್ದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕರ ವಿಚಾರಣೆ ನಡೆಸಲಾಗುತ್ತಿದೆ.

ABOUT THE AUTHOR

...view details